ಭಜನೆಯ ಮುಖಾಂತರ ಪ್ರಾರಂಭವಾಗಿ ಶಾಲೆಯ ಶಾರದಾ ಮಾತೆಗೆ ಪೂಜೆ ಮತ್ತು ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ತಿಲಕ್ ರಾಜ್ ಕಾಟಿಪಳ್ಳ ಆರಾಧಕರು ಕೊರಗಜ್ಜ ದೈವಸ್ಥಾನ ಕಾಟಿಪಳ್ಳ, ಚಂದ್ರಶೇಖರ್ ಶೆಟ್ಟಿ ಕುಳಾಯಿ ಪ್ರಧಾನ ಕಾರ್ಯದರ್ಶಿಗಳು ಗಣೇಶೋತ್ಸವ ಸೇವಾ ಸಮಿತಿ ಕುಳಾಯಿ, ಹಾಗೂ ಪ್ರಮುಖರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ಮಾಡುವ ಮೂಲಕ ಹಸಿರು ಹೊರೆಕಾಣಿಕೆಯ ಉಗ್ರಾಣ ಮುಹೂರ್ತಕ್ಕೆ ಅತಿಥಿ ಗಣ್ಯರು ಮತ್ತು ಭಕ್ತ ಜನರ ಸಮ್ಮುಖ ದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ತಿಲಕ್ ರಾಜ್ ಆರಾಧಕರು ಕೊರಗಜ್ಜ ದೈವಸ್ಥಾನ ಕಾಟಿಪಳ್ಳ, ಮಾಧವ ಸುವರ್ಣ ಆರಾಧಕರು ಕೊರಗಜ್ಜ ದೈವಸ್ಥಾನ ರಾಮನಗರ, ಚಂದ್ರ ಶೇಖರ್ ಶೆಟ್ಟಿ ಪ್ರದಾನ ಕಾರ್ಯದರ್ಶಿಗಳು ಗಣೇಶೋತ್ಸವ ಸೇವಾ ಸಮಿತಿ ಕುಳಾಯಿ, ರಮೇಶ್ ರಾವ್ ವ್ಯವಸ್ಥಾಪಕರು ಹಿಂದೂ ಅನುದಾನಿತ ಪೆರ್ಮುದೆ ಕೊಡಿಕೆರೆ,ಭಾಗ್ಯಚಂದ್ರ ರಾವ್ ಅರ್ಚಕರು, ಇದ್ದರು. ಭಕ್ತ ಜನರನ್ನು ಉದ್ದೇಶಿಸಿ ರಮೇಶ್ ರಾವ್ ಅವರು ಮಹಾ ಚಂಡಿಕಾ ಹೋಮದ ಬಗ್ಗೆ ಮಾತನಾಡಿದರು ಹಾಗೂ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ವನ್ನು ವಸಂತ್ ಕುಲಾಲ್ ಮೈಂದಗುರಿ ನೆರವೇರಿಸಿದರು
.ಕಾರ್ಯಕ್ರದಲ್ಲಿ ಹಲವು ಸಂಘ ಸಂಸ್ಥೆಗಳ ಪ್ರಮುಖರು ,ಭಕ್ತ ಜನರು ಹಾಗೂ ಮಹಾ ಚಂಡಿಕಾ ಹೋಮ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.