ಮಂಗಳೂರು: ಕರಾವಳಿಯಲ್ಲಿ ಬಹುದಿನಗಳಿಂದ ಎದುರಾಗಿರುವ ಕೆಂಪು ಕಲ್ಲಿನ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಕೆಂಪು ಕಲ್ಲಿನ ವಿಚಾರದಲ್ಲಿ ಸ್ಪಷ್ಟ ಪರವಾನಗಿಗಳ ಕೊರತೆಯಿಂದ ಉಂಟಾದ ಗೊಂದಲ ಮತ್ತು ದುರುಪಯೋಗವನ್ನು ಪರಿಹರಿಸುವ ನಿಟ್ಟಿನಲ್ಲಿ ಕಳೆಸ ಸಚಿವ ಸಂಪುಟ ಸಭೆಯಲ್ಲಿ ಶಾಶ್ವತ ಪರಿಹಾರವನ್ನು ರೂಪಿಸಲಾಗಿತ್ತು. ಕೆಂಪು ಕಲ್ಲು ಮಾರಾಟಗಾರರು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಈಗ ಹೊಸ ಕಾನೂನು ಚೌಕಟ್ಟನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿದೆ. ಇನ್ನೂ ಯಾರು ವ್ಯಾಪಾರ ಮಾಡಿದರು ಪರವಾನಿಗೆ ಪಡೆದು ಮಾಡಬೇಕು ಎಂದರು.
ಹೊಸ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮುಖ್ಯಮಂತ್ರಿ ಕೂಡ ಒಪ್ಪಿಗೆ ನೀಡಿದ್ದಾರೆ. ಕೆಂಪು ಕಲ್ಲು ವ್ಯವಹಾರಕ್ಕಾಗಿ 53 ಅರ್ಜಿಗಳಲ್ಲಿ 25 ಅರ್ಜಿದಾರರಿಗೆ ಈಗಾಗಲೇ ಹೊಸ ಕಾನೂನು ಚೌಕಟ್ಟಿನಡಿಯಲ್ಲಿ ಪರವಾನಗಿ ನೀಡಲಾಗಿದೆ. ಅಷ್ಟೇ ಅಲ್ಲದೆ ಕೆಂಪು ಕಲ್ಲು ದರ ನಿಗದಿಕೆಂಪು ಕಲ್ಲಿಗೆ ದರ ನಿಗದಿ ಬಗ್ಗೆ ಚರ್ಚೆ ನಡೆಸಲಾಗುವುದು. ಜನ ಸಾಮಾನ್ಯರಿಗೆ ಸುಲಭಮತ್ತು ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹಿಂದಿಗಿಂತ ಅಧಿಕ ಹಣ ಪಡೆದುಕೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.