Mangalore and Udupi news
Blog

ಅಕ್ರಮ ಮರಳು ಸಾಗಾಟ : ಪಿಕಪ್‌ ಚಾಲಕ ಪರಾರಿ, ಲಾರಿ ಚಾಲಕ ವಶಕ್ಕೆ

ಬೆಳ್ತಂಗಡಿ: ಕಳಿಯದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೇರುಕಟ್ಟೆ ಹಾಲಿನ ಸೊಸೈಟಿಯ ಸಮೀಪ ಜು. 13ರಂದು ಬೆಳಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ವಾಹನ ಪರಿಶೀಲನೆ ನಡೆಸಿದಾಗ ಮರಳು ತುಂಬಿದ ಒಂದು ಲಾರಿ ಹಾಗೂ ಪಿಕಪ್‌ ವಾಹನ ಬಂದಿದ್ದು ಪೊಲೀಸರನ್ನು ನೋಡಿ ಪಿಕಪ್‌ ಚಾಲಕ ವಾಹನ ಬಿಟ್ಟು ಪರಾರಿಯಾದನು. ಲಾರಿ ಚಾಲಕ ಮಹಮ್ಮದ್‌ ನೌಫಾಲ್‌ನನ್ನು ವಿಚಾರಿಸಿದಾಗ ಎರಡೂ ವಾಹನಗಳಲ್ಲಿದ್ದ ಮರಳಿಗೆ ಯಾವುದೇ ದಾಖಲೆಗಳು ಇಲ್ಲದಿರುವುದು ಕಂಡು ಬಂದಿದೆ. ಎರಡೂ ವಾಹನ ಹಾಗೂ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕರು ಹಾಗೂ ವಾಹನಗಳ ಮಾಲಕರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Comment