ಮಣಿಪಾಲ : ಉಡುಪಿ ನಗರದ ಮಣಿಪಾಲ ಸಮೀಪ ವ್ಯಕ್ತಿಯೋರ್ವರ ಸ್ಕೂಟಿಯಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಹಮ್ಮದ್ ಅರ್ಪಾನ್ ಎಂದು ಗುರುತಿಸಲಾಗಿದೆ.
ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ರಲರಣದ ವಿವರ : ದಿನಾಂಕ: 15/09/2025 ರಂದು 07:30 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ವಿದ್ಯಾರತ್ನ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ನಂದಿನಿ ಮಿಲ್ಕ್ ಪಾರ್ಲರ್ ಬಳಿ ಸಾರ್ವಜನಿಕ ಸ್ಥಳದಲ್ಲಿ KA20-HF-8927 ನೇ ನಂಬ್ರದ ಸ್ಕೂಟಿಯಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಪಡೆದ ಮಾಹಿತಿ ನೀಡಿದ್ದು ಅದರಂತೆ ಮಹೇಶ್ ಪ್ರಸಾದ್, ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಮಣಿಪಾಲದ ವಿದ್ಯಾರತ್ನ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ನಂದಿನಿ ಮಿಲ್ಕ್ ಪಾರ್ಲರ್ ಬಳಿ ತೆರಳಿ, ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ KA20-HF-8927 ನೇ ನಂಬ್ರದ ಸ್ಕೂಟಿಯ ಬಳಿಯಲ್ಲಿ ನಿಂತುಕೊಂಡಿದ್ದನ್ನು ಖಚಿತಪಡಿಸಿಕೊಂಡು 09:20 ಗಂಟೆಗೆ ದಾಳಿ ಮಾಡಿ, ಆರೋಪಿ ಮಹಮ್ಮದ್ ಅರ್ಫಾನ್ (26), ತಂದೆ: ಮೊಹಮ್ಮದ್ ಆದಿಲ್ ವಾಸ: ಮನೆ ನಂಬ್ರ: 2-1-31 ಬದ್ರಿಯಾ ಮಸೀದಿ ಬಳಿ. ವಿನಯ ನಗರ, ಬೆಳಪು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಈತನನ್ನು ವಶಕ್ಕೆ ಪಡೆದುಕೊಂಡು KA20-HF-8927ನೇ ನಂಬ್ರದ ಸ್ಕೂಟಿಯ ಡ್ಯಾಶ್ ಬೋರ್ಡ ನಲ್ಲಿದ್ದ ಎರಡು ಮೊಬೈಲ್ ಹಾಗೂ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಡಬ್ಬಿ ಇದ್ದು ಪರಿಶೀಲಿಸಲಾಗಿ ಅದರಲ್ಲಿ ಒಂದು ಏರ್ ಜಿಪ್ ಪ್ಲಾಸ್ಟಿಕ್ ಕವರ್ ಇದ್ದು ಅದರಲ್ಲಿ ಬಿಳಿ ಬಣ್ಣದ MDMA 6.61 ಗ್ರಾಂ ಮಾದಕ ವಸ್ತು ವನ್ನು ಸ್ವಾಧೀನ ಪಡಿಸಿಕೊಂಡಿದ್ದಾಗಿದೆ. ಅದರ ಅಂದಾಜು ಮೌಲ್ಯ ಸುಮಾರು 13000/- ಆಗಬಹುದು ಹಾಗೂ 2 ಮೊಬೈಲ್ ಗಳ ಒಟ್ಟು ಅಂದಾಜು ಮೌಲ್ಯ 60,000/- ರೂ ಆಗಬಹುದು. ಆರೋಪಿಯು ಸ್ವಂತ ಲಾಭಕ್ಕಾಗಿ MDMA ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ನಿಂತುಕೊಂಡಿದ್ದು, ಸ್ವತುಗಳನ್ನು ಸ್ವಾಧೀನಪಡಿಸಿಕಕೊಂಡಿರುವುದಾಗಿದೆ.