Mangalore and Udupi news
Blog

ಮಲ್ಪೆ : ಬೈಕ್ ಕಳವು : ಪ್ರಕರಣ ದಾಖಲು…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನ ಸಮೀಪ ಯಾರೋ ಕಳ್ಳರು ಬೈಕ್ ಕಳವುಗೈದ ಘಟನೆ ನಡೆದಿದೆ.

ಮುದ್ರಾಡಿ ಗ್ರಾಮದ ನಿವಾಸಿ ಸುಕುಮಾರ್ ಎಂಬವರ ಬೈಕ್ ಕಳವು ಆಗಿದೆ ಎಂದು ತಿಳಿದು ಬಂದಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿ ಸುಕುಮಾರ್‌ (40) ಮುದ್ರಾಡಿ ಗ್ರಾಮ, ಹೆಬ್ರಿ ತಾಲೂಕು ಇವರು ಮಲ್ಪೆಯಲ್ಲಿ ಬೋಟಿನ ಮರದ ಕೆಲಸ ಮಾಡಿಕೊಂಡಿದ್ದು ಅವರ ಬಾಬ್ತು KA20HF6421 ನಂಬ್ರದ ಹೀರೊ ಸ್ಪೆಂಡರ್‌ ಪ್ಲಸ್‌ ಮೋಟಾರು ಸೈಕಲ್‌ ಅನ್ನು ದಿನಾಂಕ;12/09/2025 ರಂದು ಮದ್ಯಾಹ್ನ 02:30 ಗಂಟೆಗೆ ಸುಮಾರಿಗೆ ಮಲ್ಪೆ ಬಂದರಿನ ಅಗ್ನಿ ಶಾಮಕ ಕಚೇರಿಯ ಮುಂಭಾಗದ ರಸ್ತೆ ಬದಿಯ ಗೂಡಅಂಗಡಿ ಪಕ್ಕದಲ್ಲಿ ಇರಿಸಿ ಕೆಲಸದ ಬಗ್ಗೆ ಹೋಗಿದ್ದು, ಈ ದಿನ ದಿನಾಂಕ:13/09/2025 ರಂದು ಮದ್ಯಾಹ್ನ 02:00 ಗಂಟೆ ಸುಮಾರಿಗೆ ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಮೋಟಾರ್‌ ಸೈಕಲ್‌ ಕಾಣೆಯಾಗಿರುತ್ತದೆ. ಸದ್ರಿ ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆ ಯಾಗಿರುವುದಿಲ್ಲ.ಆದುದರಿಂದ ಪಿರ್ಯಾದಿದಾರರ ಮೋಟಾರು ಸೈಕಲನ್ನು ದಿನಾಂಕ:12/೦9/2025 ರಂದು ಮದ್ಯಾಹ್ನ 02:30 ಗಂಟೆಯಿಂದ ದಿನಾಂಕ 13/09/2025 ರ ಮದ್ಯಾಹ್ನ 02:00 ಗಂಟೆಯ ಮದ್ಯಮಾವಧಿಯಲ್ಲಿ ಯೋರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

Related posts

Leave a Comment