Mangalore and Udupi news
Blog

500 ಕೋ. ದಾಟಿದ ಶಕ್ತಿ ಫಲಾನುಭವಿಗಳ ಸಂಖ್ಯೆ : ಮೂಡುಬಿದಿರೆಯಲ್ಲಿ ಸಂಭ್ರಮಾಚರಣೆ

ಮೂಡುಬಿದಿರೆ : ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋ. ಗಡಿ ದಾಟಿರುವ ಹಿನ್ನೆಲೆಯಲ್ಲಿ ಮೂಡುಬಿದಿರೆ ತಾಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯು ಸೋಮವಾರ ‘ಶಕ್ತಿ-ಸಂಭ್ರಮಾಚರಣೆ’ ಯನ್ನು ನಡೆಸಿತು.
ಗ್ಯಾರಂಟಿ ಯೋಜನೆ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ
ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಮಾಜಿ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಸಹಿತ ಹಲವು ಪ್ರಮುಖರು ಈ ಮೂಡುಬಿದಿರೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಂಭ್ರಮವನ್ನಾಚರಿಸಿಕೊಂಡರು.

ಪ್ರಮುಖರಾದ ರಾಜೇಶ್ ಕಡಲಕೆರೆ,ಚಂದ್ರಹಾಸ ಸನಿಲ್,ಸುರೇಶ್ ಪ್ರಭು,ಕೊರಗಪ್ಪ,ಪುರುಷೋತ್ತಮ ನಾಯಕ್ ಪುತ್ತಿಗೆ, ರಜನಿ,ಸುಪ್ರಿಯಾ ಡಿ.ಶೆಟ್ಟಿ,ಕ್ಲಾರಿಯೋ,ಪ್ರವೀಣ್ ಇರುವೈಲ್, ಶಿವಾನಂದ ಪಾಂಡ್ರು,ಸುಕುಮಾರ್ ಜೈನ್,ಮುರಳೀಧರ ಕೋಟ್ಯಾನ್, ಅನೀಶ್ ಡಿಸೋಜ,ಅಲ್ತಾಫ್ ,ಗಣೇಶ್ ಮೂಡುಕೊಣಾಜೆ,ಸತೀಶ್ ಭಂಡಾರಿ, ಸತೀಶ್ ಕೋಟ್ಯಾನ್,ಸುರೇಶ್ ಗೋಳಾರ,ಜೈಸನ್ ಪಿರೇರ ಶಿರ್ತಾಡಿ, ಪ್ರದೀಪ್ ಶೆಟ್ಟಿ ಇರುವೈಲ್,ಸಲಾಮ್ ಹೊಸಂಗಡಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸರಕಾರಿ ಬಸ್ ಚಾಲಕ ,ನಿರ್ವಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.

Related posts

Leave a Comment