Mangalore and Udupi news
Blog

ಮುಲ್ಕಿ: ಮಟ್ಕಾ ಅಡ್ಡೆಗೆ ದಾಳಿ : ಮೂವರ ಬಂಧನ..!!

ಮುಲ್ಕಿ : ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿಕೊಂಡು ಅಕ್ರಮ ಜೂಜಾಟ ಅಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮುಲ್ಕಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ದಿನೇಶ್ ಎ ಶೆಟ್ಟಿ, ರಾಕೇಶ್‌ ಶೆಟ್ಟಿ ಮತ್ತು ರಾಕೇಶ್ ಆಚಾರ್ಯ ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಗಳನ್ನು ಬಂಧಿಸಿ ಸುಮಾರು 2000 ರೂ. ನಗದು ಹಣ ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Related posts

Leave a Comment