ಕಾರ್ಕಳ : ನಿಟ್ಟೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ
ಹಾಸ್ಟೆಲಿನ ಗೋಡೆಯ ಮೇಲೆ ಕೋಮು ದ್ವೇಷವನ್ನು ಸೃಷ್ಟಿಸುವಂತಹ ಪದಗಳನ್ನು ಬರೆದಿರುವ ಪ್ರಕರಣ ಸಂಬಂಧಿಸಿದಂತೆ ಜು. 14ರಂದು ಕಾರ್ಕಳ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತಳನ್ನು ಫಾತಿಮಾ ಶಬ್ದಾ (21) ಎಂದು ಗುರುತಿಸಲಾಗಿದೆ, ಈಕೆ ಕಾಲೇಜು ವಿದ್ಯಾರ್ಥಿನಿ.
ಮೇ 7ರಂದು ಸಂಜೆ 6 ಗಂಟೆಗ ಸುಮಾರಿಗೆ ಈ ಘಟನೆ ನಡೆದಿದೆ. ಕಾಲೇಜು ಮುಖ್ಯ ಮಹಿಳಾ ಹಾಸ್ಟೆಲ್‌ನ ವ್ಯವಸ್ಥಾಪಕಿ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಗಿದೆ. ಸಮಗ್ರ ತನಿಖೆಯ ಅನಂತರ, ಕಾರ್ಕಳ ಗ್ರಾಮೀಣ ಪೊಲೀಸರು ಜುಲೈ 14 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ, ವಿದ್ಯಾರ್ಥಿಯನ್ನು ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.