ಉಡುಪಿ: ಮಹಿಳೆಯೊಬ್ಬರ ವಾಟ್ಯಾಪ್ ನಂಬರ್ ಗೆ ಟ್ರೇಟಿಂಗ್ ಇನ್ವೆಸ್ಟ್ ಮೆಂಟ್ ಮಾಡುವಂತೆ ಸಂದೇಶ ಬಂದಿದ್ದು, ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುವುದಾಗಿ ವ್ಯಕ್ತಿಯೋರ್ವರ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಗೊಳಾಗದವರು ಹೆನ್ರಿ ಡಿಅಲ್ಮೇಡಾ ಎಂದು ತಿಳಿದು ಬಂದಿದೆ.
ಈ ವಂಚನೆ ಘಟನೆ ಬಗ್ಗೆ ಉಡುಪಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಿರ್ಯಾದಿದಾರರಾದ ಹೆನ್ರಿ ಡಿ ಅಲ್ಮೇಡಾ(69) ಇವರು ದಿನಾಂಕ 19/07/2025 ರಂದು ಫೇಸ್ ಬುಕ್ ನಲ್ಲಿ ಇನ್ವೆಸ್ಟ್ ಮೆಂಟ್ ಟ್ರೇಡಿಂಗ್ ಮಾಡುವುದರ ಬಗ್ಗೆ ಜಾಹಿರಾತನ್ನು ನೋಡಿದ್ದು, ಅದನ್ನು ಕ್ಲಿಕ್ ಮಾಡಿದಾಗ https://in.bobcaps-qib.com/ ಓಪನ್ ಆಗಿದ್ದು ಪಿರ್ಯಾದಿದಾರರ ವಾಟ್ಯಾಪ್ ನಂಬರ್ ಗೆ ಟ್ರೇಟಿಂಗ್ ಇನ್ವೆಸ್ಟ್ ಮೆಂಟ್ ಮಾಡುವಂತೆ ಸಂದೇಶ ಬಂದಿದ್ದು, ನಂತರ ಒರ್ವ ವ್ಯಕ್ತಿ ತನ್ನನ್ನು ಅಂಕಿತಾ ಘೋಷ್ ಎಂದು ಪರಿಚಯಿಸಿಕೊಂಡು ಪಿರ್ಯಾದಿದಾರರಿಗೆ ಇನ್ವೆಸ್ಟ್ ಮೆಂಟ್ ಬಗ್ಗೆ ಮಾಹಿತಿ ತಿಳಿಸಿ ಒಂದು QIB ಖಾತೆಯನ್ನು ಮಾಡಿಸಿಕೊಟ್ಟು, 725 BOB CAPS ವಾಟ್ಯಾಪ್ ಗ್ರೂಪ್ ಗೆ ಸೇರ್ಪಡೆ ಮಾಡಿರುತ್ತಾರೆ. ಗ್ರೂಪಿನಲ್ಲಿನ ವಿವಿದ ನಂಬರ್ ಗಳಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ಗಳಿಸಬಹುದು ಎಂದು ಸಂದೇಶಗಳಿದ್ದು ಅದನ್ನ ನಂಬಿದ ಪಿರ್ಯಾದಿದಾರರು 725 BOB CAPS ಕಸ್ಟಮರ್ ಕೇರ್ ಸರ್ವಿಸ್ ಹುಡುಕಿ ವಾಟ್ಯಾಪ್ ಮೂಲಕ ಸಂಪರ್ಕಿಸಿದಾಗ ಅವರು ವಿವಿಧ ಬ್ಯಾಂಕ್ ಖಾತೆಗಳನ್ನು ನೀಡಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದು ಪಿರ್ಯಾದಿದಾರರು ದಿನಾಂಕ 22/07/2025 ರಿಂದ ದಿನಾಂಕ 01/09/2025ರ ವರೆಗೆ ಹಂತ ಹಂತವಾಗಿ ಒಟ್ಟು 1,32,90,000/- ಹಣವನ್ನು ಹೂಡಿಕೆ ಮಾಡಿದ್ದು ತದನಂತರ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿದೆ.