Mangalore and Udupi news
Blog

ಬಂಟ್ವಾಳ: ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ

ಬಂಟ್ವಾಳ: ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ ಹಾಗೂ ಜೂಜಾಟದ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಇತ್ತೀಚೆಗೆ ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ತಿಮ್ಮೊಟ್ಟು ಎಂಬಲ್ಲಿ ನಡೆದಿದೆ.ದಾಳಿ ಸಂದರ್ಭ ಜೂಜಾಟ ನಿರತರನ್ನು ಹಾಗೂ ಜೂಜಾಟಕ್ಕೆ ಬಳಸಿದ ಕೋಳಿ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪುಂಜಾಲಕಟ್ಟೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ತಿಮ್ಮೊಟ್ಟು ಎಂಬಲ್ಲಿಯ ಸರಕಾರಿ ಸ್ಥಳಕ್ಕೆ ಹೋದಾಗ ಅಪಾದಿತರಾದ ಜಗದೀಶ್ ಶೆಟ್ಟಿ, ನವೀನ, ಪ್ರದೀಪ್‌, ಕೇಶವ ತಿಮ್ಮೊಟ್ಟು, ಅಜಿತ್ ಇರ್ವತ್ತೂರು ಮತ್ತು ಇತರರು ಸಂಘಟಿತರಾಗಿ ಸೇರಿಕೊಂಡು ಹಣವಾಗಿ ಪಣವಾಗಿಟ್ಟು ಕೊಂಡು ಅಕ್ರಮವಾಗಿ ಕೋಳಿಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಜೂಜಾಟವಾಡುತ್ತಿದ್ದರು ಎಂದು ಹೇಳಲಾಗಿದೆ.

ಈ ವಿಚಾರ ತಿಳಿದು ಪೊಲೀಸರು ದಾಳಿ ನಡೆಸಿ ಆಪಾದಿತರನ್ನು ಮತ್ತು ಆಪಾದಿತರು ಕೋಳಿ ಅಂಕಕ್ಕೆ ಉಪಯೋಗಿಸಿದ ಒಂದು ಹುಂಜ ಕೋಳಿ ಹಾಗೂ ಜೂಜಾಟಕ್ಕೆ ಉಪಯೋಗಿಸಿದ 9430 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related posts

Leave a Comment