ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರಿನಲ್ಲಿ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಆಟೋ ಚಾಲಕರಾಗಿರುವ ಸಂಪತ್ (38) ಎಂದು ತಿಳಿದು ಬಂದಿದೆ.
ಸಂಪತ್ ಅವರು ಶುಕ್ರವಾರ ಸಂಜೆ ತನ್ನ ಮನೆಯಲ್ಲಿ ಬಿದಿರಿನ ಕೋಲಿನ ಮೂಲಕ ಸೀಯಾಳ ತೆಗೆಯುತ್ತಿದ್ದಾಗ, ಮೇಲ್ಬಾಗದಲ್ಲಿದ್ದ ಹೈಟೆಂಕ್ಷ ನ್ ತಂತಿ ತಗುಲಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ .
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.