Mangalore and Udupi news
Blog

ಚಂಡಿಕಾ ಹೋಮದ ಪೂರ್ವ ತಯಾರಿ ಹಾಗೂ ಆಮಂತ್ರಣ ಪತ್ರಿಕೆ ಅಕ್ಷತೆಯನ್ನು ದೇವಸ್ಥಾನದಲ್ಲಿ ಇಟ್ಟು ಪ್ರಾರ್ಥನೆ ಸ್ವಾಮೀಜಿಗಳ ಆಶೀರ್ವಚನದಲ್ಲಿ ಆದಿತ್ಯವಾರ ನಡೆಯಲಿದೆ ಆಮಂತ್ರಣ ಪತ್ರಿಕೆ ಬಿಡುಗಡೆ *ಸದೃಡ ಭಾರತ ಸಶಕ್ತ ಸಮಾಜದ ಸಂಕಲ್ಪದೊಂದಿಗೆ ಮಹಾ ಚಂಡಿಕಾ ಹೋಮ*

ಸುರತ್ಕಲ್ : ಮಂಜಣ್ಣ ಸೇವಾ ಬ್ರಿಗೇಡ್ ಮಂಗಳೂರು ಹಾಗೂ ಗೆಳೆಯರ ಬಳಗ ಸುರತ್ಕಲ್ ಆಶ್ರಯದಲ್ಲಿ ನವರಾತ್ರಿಯ 5ನೇ ದಿನದಂದು ಮಹಾ ಚಂಡಿಕಾ ಹೋಮ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ನಡೆಯಿತು.


ಸಭೆಯಲ್ಲಿ ಊರಿನ ಸಂಘ ಸಂಸ್ಥೆಗಳ ಉಪಸ್ಥಿತಿಯಲ್ಲಿ ಆದ ನಿರ್ಣಯದಂತೆ ಗ್ರಾಮದ ದೇವಸ್ಥಾನ ಶ್ರೀ ನಂದನೇಶ್ವರ ದೇವಸ್ಥಾನ ಪಣಂಬೂರು ಹಾಗೂ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರ ಹಾಗೂ ಶ್ರೀ ಭಗವತಿ ದೇವಸ್ಥಾನ ಸಸಿಹಿತ್ಲು ಪಂಚ ಶ್ರೀ ದೇವಿಯರ ಆಶೀರ್ವಾದ ಪಡೆದು ಪ್ರಥಮವಾಗಿ ಆಮಂತ್ರಣವನ್ನು ಹಾಗೂ ಅಕ್ಷತೆಯನ್ನಿಟ್ಟು ಸಾನಿಧ್ಯದಲ್ಲಿ ಪ್ರಾರ್ಥಿಸಿದರು.


ಸೆಪ್ಟೆಂಬರ್ 7ನೇ ತಾರೀಕಿನ ಆದಿತ್ಯವಾರ ಬೆಳಗ್ಗೆ 9 ಗಂಟೆಗೆ ಸ್ವಾಮೀಜಿಗಳ ಆಶೀರ್ವಚನಗಳ ಮೂಲಕ ಮಹಾ ಚಂಡಿಕಾ ಹೋಮ ಹಾಗೂ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡುವ ಬಗ್ಗೆ ಸಮಿತಿಯು ತಿಳಿಸಿತು.

Related posts

Leave a Comment