ಉಡುಪಿ : ರಾ.ಹೆ. 66ರ ಕಟಪಾಡಿ ಜಂಕ್ಷನ್ ಬಳಿ 16 ಚಕ್ರದ ಬೃಹತ್ ಗಾತ್ರದ ಟ್ಯಾ೦ಕರೊಂದು ಒಂದು ವಾರದಿಂದ ನಿಂತಿದ್ದು, ಅಪಾಯಕ್ಕೆಡೆ ಮಾಡುವ ಸಾಧ್ಯತೆ ಇದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿದೆ.
ಸದಾ ವಾಹನ ದಟ್ಟಣೆ, ಜನನಿಬಿಡ ಕಟಪಾಡಿ ಜಂಕ್ಷನ್ನ ಅನತಿ ದೂರದಲ್ಲಿಯೇ ನಿಂತಿದೆ. ಮಳೆ ಬಂದಾಗ ಮತ್ತು ಕತ್ತಲಾವರಿಸುತ್ತಿದ್ದಂತೆ ತರಾತುರಿಯಲ್ಲಿ ಸಂಚರಿಸುವ ವಾಹನಗಳ ಭರಾಟೆಯಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಸಂಚಾರದ ಸುವ್ಯವಸ್ಥೆಯ ದೃಷ್ಟಿಯಿಂದ ಟ್ಯಾಂಕರ್ ತೆರವುಗೊಳಿಸಿ ರಾ.ಹೆ. ವಾಹನಗಳ ಮುಕ್ತ ಸಂಚಾರಕ್ಕೆ ತುರ್ತಾಗಿ ಅನುಕೂಲ ಕಲ್ಪಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧ ಪಟ್ಟ ಇಲಾಖೆಯವರು ಈ ಕೂಡಲೇ ಎಚ್ಚೆತ್ತು ಅಪಘಾತ ಸಂಭವಿಸುವ ಮುನ್ನವೇ ಈ ಘನ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆತಂಕಿತ ಜನತೆ ಆಗ್ರಹಿಸಿದ್ದಾರೆ.