Mangalore and Udupi news
Blog

ಅಕ್ರಮ ಕೆಂಪು ಕಲ್ಲು ಸಾಗಾಟ : ಚಾಲಕ‌ ವಶಕ್ಕೆ…!!

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿರುವಾಗ ಪೊಲೀಸರು ಲಾರಿ‌ ಸಹಿತ ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಚಾಲಕ ಹಕಿಂ ಎಂಬುವನನ್ನು ಬಂಧಿಸಿದ್ದಾರೆ.

ಪ್ರಕರಣ ಸಾರಾಂಶ : ವಿಟ್ಲ ಪೊಲೀಸ್‌ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಸೋಮನಾಥ ರೈರವರು ಸಿಬ್ಬಂದಿಯೊಂದಿಗೆ ದಿನಾಂಕ:07/08/2025 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದ ಸಮಯ 12.00 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಪ್ರಸಾದ್‌ ಸರ್ವಿಸ್‌ ಸ್ಟೇಷನ್ ಮುಂಬಾಗದ ಸಾರ್ವಜನಿಕ ರಸ್ತೆಯಲ್ಲಿ ಕೇಪು ಕಡೆಯಿಂದ ವಿಟ್ಲ ಕಡೆಗೆ KA-21-C-6056ನೇಯದರಲ್ಲಿ ಅದರ ಚಾಲಕ ಹಕಿಂ ಪ್ರಾಯ 30 ವರ್ಷ ತಂದೆ: ಆದಂ, ವಾಸ: ಪಟ್ರಮೆ ಮನೆ, ಕೊಕ್ಕಡ ಗ್ರಾಮ, ಬೆಳ್ತಂಗಡಿ ತಾಲೂಕುರವರು ಕೇರಳ ರಾಜ್ಯದ ಧರ್ಮತ್ತಡ್ಕ ಎಂಬಲ್ಲಿಂದ ಕೆಂಪು ಕಲ್ಲುಗಳನ್ನು ಲೋಡ್‌ ಮಾಡಿಕೊಂಡು ಯಾವುದೇ ಪರವಾಣಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದದನ್ನು ಪತ್ತೆ ಹಚ್ಚಿ ಪಂಚರ ಸಮಕ್ಷಮ ಮಹಜರು ಮುಖೆನ ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಲಾರಿಯ ಅಂದಾಜು ಮೌಲ್ಯ 10 ಲಕ್ಷ ಹಾಗೂ ಕೆಂಪು ಕಲ್ಲುಗಳ ಅಂದಾಜು ಮೌಲ್ಯ 14000/- ಆಗಿದ್ದು ಯಾವುದೇ ಪರವಾಣಿಗೆ ಮತ್ತು ದಾಖಲಾತಿಗಳು ಇಲ್ಲದೇ ಕೆಂಪು ಕಲ್ಲುಗಳನ್ನು ಕಳ್ಳತನ ಮಾಡಿ ಲಾರಿಯಲ್ಲಿ ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡಿರುವುದಾಗಿದೆ.

Related posts

Leave a Comment