Mangalore and Udupi news
Blog

ಅಲೆವೂರಿನ ಕುಕ್ಕಿಕಟ್ಟೆಯಲ್ಲಿ‌ ಮುಸುಕುಧಾರಿ ಕಳ್ಳರಿಂದ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ…!!

ಮೂವರು ಮುಸುಕುದಾರಿ ಕಳ್ಳರ ಓಡಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ….

ಉಡುಪಿ: ನಗರದಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದ್ದು ಉಡುಪಿ ಜಿಲ್ಲೆಯ ಅಲೆವೂರು ಬಳಿ ಮೂವರು ಮುಸುಕುದಾರಿ ಕಳ್ಳರ ಚಲನವಲನ ಆತಂಕ ಮೂಡಿಸಿದೆ

ಅಲೆವೂರಿನಲ್ಲಿ ಮೂವರು ಮುಸುಕುದಾರಿ ಕಳ್ಳರು ಕುಕ್ಕಿಕಟ್ಟೆ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳ್ಳರ ಈ ಗ್ಯಾಂಗ್ ಕುಕ್ಕಿಕಟ್ಟೆ ಸಮೀಪದ ಕಲ್ಯಾಣ ನಗರದಲ್ಲಿ ಫ್ಲ್ಯಾಟ್ ಒಂದಕ್ಕೆ ನುಗ್ಗಿರುವ ಮಾಹಿತಿ ಲಭ್ಯವಾಗಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ಬೇರೆ ಕಡೆಯೂ ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Related posts

Leave a Comment