Mangalore and Udupi news
Blog

ಸುರತ್ಕಲ್ : ಸಮುದ್ರಕ್ಕೆ ಇಳಿದಿದ್ದ ಇಬ್ಬರು ಯುವಕರು : ಓರ್ವ ಮೃತ್ಯು…!!

ಮಂಗಳೂರು : ನಗರದ ಸಮೀಪ ಸುರತ್ಕಲ್ ಇಲ್ಲಿನ ಸಸಿಹಿತ್ಲು ಮೂಂಡಾ ಬೀಚ್ ಬಳಿ ಸಮುದ್ರ ಇಳಿದಿದ್ದ ಇಬ್ಬರು ಯುವಕರ ಪೈಕಿ ಓರ್ವ ಮೃತಪಟ್ಟು ಇನ್ನೊರ್ವನನ್ನು ಸ್ಥಳೀಯರು ರಕ್ಷಿಸಿದ ಘಟನೆ ಸಸಿಹಿತ್ಲು ಎಂಬಲ್ಲಿ ನಡೆದಿದೆ.


ಸಾವನ್ನಪ್ಪಿದ ಯುವಕ ಪಡುಪಣಂಬೂರು ಕಜಕತೋಟ ನಿವಾಸಿ ದಿ. ಅನ್ವರ್ ಅವರ ಮಗ ಮುಹಮ್ಮದ್ ಸಮೀ‌ರ್ (23) ಎಂದು ತಿಳಿಯಲಾಗಿದೆ. ಪಡುಪಣಂಬೂರು ಕಜಕತೋಟ ನಿವಾಸಿ ಅಬೂಬಕರ್ ಅವರ ಮಗ ಐಮಾನ್ (23) ಎಂಬಾತನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ಒಂದೇ ಕುಟುಂಬದ ಆರು ಮಂದಿ ಸಹೋದರರು ಭಾನುವಾರ ಸಂಜೆ ಸಸಿಹಿತ್ಲು ಮೂಂಡಾ ಬೀಚ್ ವಿಹಾರಕ್ಕೆಂದು ತೆರಳಿದ್ದರು.
ಈ ವೇಳೆ ಇಬ್ಬರು ಯುವಕರು ನೀರಿನಲ್ಲಿ ಆಡುತ್ತಿದ್ದ ಸಂದರ್ಭ ಬೃಹತ್ ಅಲೆಯ ಸೆಳೆತಕ್ಕೆ ಸಿಲುಕಿ ಮುಹಮ್ಮದ್ ಸಮೀರ್ ಮತ್ತು ಐಮಾನ್ ಸಮುದ್ರ ಪಾಲಾಗಿದ್ದರು.

ಉಳಿದವರ ಬೊಬ್ಬೆಕೇಳಿ ಸ್ಥಳಕ್ಕೆ ಬಂದ ಸ್ಥಳಿಯ ನಿವಾಸಿ ಮೀನುಗಾರರು ಇಬ್ಬರನ್ನೂ ರಕ್ಷಿಸಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ಪೈಕಿ, ಐಮಾಮ್ ಅಪಾಯದಿಂದ ಪಾರಾಗಿದ್ದು, ಮುಹಮ್ಮದ್ ಸಮೀರ್ ಮೃತಪಟ್ಟಿದ್ದಾರೆ.

Related posts

Leave a Comment