Mangalore and Udupi news
Blog

ಬ್ರಹ್ಮಾವರ : ಅಕ್ರಮ ಮರಳು ಸಾಗಾಟ : ಟಿಪ್ಪರ್ ವಶಕ್ಕೆ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಹತ್ತಿರ ಪೊಲೀಸರು ಮಾಹಿತಿ ಮೇರೆಗೆ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರ ಜಯಕುಮಾರ್‌ ಸಹಾಯಕ ಪೊಲೀಸ್‌ ಉಪನಿರೀಕ್ಷಕರು ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ: 11-12/11/2025 ರಂದು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದು, ದಿನಾಂಕ 12/11/2025 ರಂದು ಸಮಯ ಸುಮಾರು ಬೆಳಿಗ್ಗೆ 01.00 ಗಂಟೆಗೆ ಆರೂರು ಗ್ರಾಮದ ಆರೂರು ಜಂಕ್ಷನ್‌ ಬಳಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ 1ನೇ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಆರೂರು ಗ್ರಾಮದ ಬೀಟ್‌ ಸಿಬ್ಬಂದಿ ರವರು ಕರೆ ಮಾಡಿ, ಬೆಳ್ಮಾರು ಮಡಿಸಾಲು ಹೊಳೆಯಲ್ಲಿ ಒಂದು 407 ಟಿಪ್ಪರ್‌ ವಾಹನದಲ್ಲಿ ಮರಳು ತುಂಬಿಸಿಕೊಂಡು ಕೊಳಲಗಿರಿ ಕಡೆಗೆ ಬರುತ್ತಿರುವ ಬಗ್ಗೆ ಫಿರ್ಯಾದಿದಾರರಿಗೆ ಮಾಹಿತಿ ನೀಡಿದ್ದು ಪಿರ್ಯಾದಿದಾರರು ಖಾಸಗಿ ಮೋಟಾರು ಸೈಕಲ್‌ ನಲ್ಲಿ ಕೊಳಲಗಿರಿ ಜಂಕ್ಷನ್‌ ಬಳಿ ಬಂದಾಗ ಬೆಳಗಿನ ಜಾವ ಸಮಯ ಸುಮಾರು 01.30 ಗಂಟೆಗೆ ಅಲ್ಲಿಗೆ ಬಂದು ಬೆಳ್ಮಾರು ಕಡೆಯಿಂದ ಬರುತ್ತಿದ್ದ ವಾಹನ ತಪಾಸಣೆ ಮಾಡುತ್ತಿದ್ದಾಗ ಕೊಳಲಗಿರಿ ಕಡೆಗೆ ಒಂದು ಮಿನಿ ಟಿಪ್ಪರ್ ವಾಹನದಲ್ಲಿ ಏನೋ ತುಂಬಿಸಿಕೊಂಡು ಬರುತ್ತಿರುವುದನ್ನು ನೋಡಿ ಅದರ ಚಾಲಕನಿಗೆ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ್ದು ಚಾಲಕನು ಟಿಪ್ಪರ್ ವಾಹನವನ್ನು ರಸ್ತೆ ಬದಿಯಲ್ಲಿ ಸ್ವಲ್ಪ ಹಿಂದಕ್ಕೆ ನಿಲ್ಲಿಸಿ ಓಡಿಹೋಗಿದ್ದು ಹಾಗೂ ಟಿಪ್ಪರ್‌ ವಾಹನದಿಂದ ಕೆಲವು ಜನರು ಇಳಿದು ಅಲ್ಲಿಂದ ಓಡಿ ಹೋದರು. ಸದ್ರಿ ವಾಹನವು TATA ಕಂಪೆನಿಯ 407 ಮಾದರಿಯ ಮಿನಿ ಟಿಪ್ಪರ್‌ ವಾಹನವಾಗಿದ್ದು, ವಾಹನದ ನಂಬ್ರ KL20J4326 ಆಗಿದ್ದು ವಾಹನದ ಅಂದಾಜು ಮೌಲ್ಯ ಸುಮಾರು 4.00.000/- ರೂಪಾಯಿ ಆಗಬಹುದು. ಸದ್ರಿ ಟಿಪ್ಪರ್‌ ವಾಹನದ ಹಿಂಬದಿಯ ಬಾಡಿಯಲ್ಲಿ ಸುಮಾರು 1.5 ಯುನಿಟ್‌‌ ಮರಳು ಇದ್ದು ಅದರ ಅಂದಾಜು ಮೌಲ್ಯ 5000/- ರೂಪಾಯಿ ಆಗಬಹುದು. ಸದ್ರಿ ವಾಹನದಲ್ಲಿ ಮರಳನ್ನು ಸಾಗಾಟ ಮಾಡಲು ಪರವಾನಿಗೆ ಪತ್ರ ಕಂಡು ಬಂದಿರುವುದಿಲ್ಲ. ಓಡಿ ಹೋದವರನ್ನು ಕ್ಲೈಮೆಂಟ್‌, ಗಣೇಶ್‌, ಸಂದೇಶ್‌ ಮತ್ತು ಅಶ್ವಿನ್‌ ಹಾಗೂ ಇತರರು ಎಂಬವರಾಗಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ :232/2025 ಕಲಂ: 303(2), 112 BNS & ಕಲಂ: 4 (1), 4 (1A), 21 (1) (2) Mines and minerals regulation of development Act 1957 , ಕಲಂ: 3 (1), 42(1), 44 Karnataka minor mineral consistent rule-1944 ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

Leave a Comment