*ದಿ.ಶರಣ್ ಶೆಟ್ಟಿ ತೋಕೂರು ಮತ್ತು ದಿ.ಶಿವರಾಜ್ ಕೋಡಿಕೆರೆಯವರ ಸ್ಮರಣಾರ್ಥ ಕೋಡಿಕೆರೆಯಲ್ಲಿ ನಡೆದ ರಕ್ತದಾನ ಕಾರ್ಯಕ್ರಮ*
*ಸುರತ್ಕಲ್: ಮಂಜಣ್ಣ ಸೇವಾ ಬ್ರಿಗೇಡ್ (ರಿ) ಟ್ರಸ್ಟ್ ಮಂಗಳೂರು ಹಾಗೂ ಗೆಳೆಯರ ಬಳಗ ಸುರತ್ಕಲ್ ರವರ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ*
ದಿ.ಶರಣ್ ಶೆಟ್ಟಿ ಹಾಗೂ ದಿ.ಶಿವರಾಜ್ ಕೋಡಿಕೆರೆ ಇವರ ಸ್ಮರಣಾರ್ಥ ಸಮಸ್ತ ಸ್ನೇಹಿತರ ಹಾಗೂ ಎ.ಜೆ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ
ಮೂರನೇ ವರ್ಷದ ಬೃಹತ್ ರಕ್ತದಾನ ಶಿಬಿರವು ಭಾನುವಾರ ಹಿಂದೂ ಅನುದಾನಿತ ಪ್ರಾಥಮಿಕ ಶಾಲೆ ಪೆರ್ಮುದೆ ಕೋಡಿಕೆರೆ ಇಲ್ಲಿ ನೆರವೇರಿತು.
ರಕ್ತದಾನ ಶಿಬಿರದಲ್ಲಿ 150 ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿ ಅಗಲಿದ ದಿವ್ಯ ಚೇತನಗಳಿಗೆ ಭಾವಪೂರ್ಣ ಶೃದ್ದಾಂಜಲಿ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಪೆರ್ಮುದೆ ಹಿಂದೂ ಅನುದಾನಿತ ಶಾಲೆಯ ಸಂಚಾಲಕರಾದ ರಮೇಶ್ ರಾವ್, ಕೋಡಿಕೆರೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಭಾಗ್ಯಚಂದ್ರ ರಾವ್, ಎ.ಜೆ ಬ್ಲಡ್ ಬ್ಯಾಂಕ್ ಸಂಸ್ಥೆಯ ನಿರ್ವಾಹಕರಾದ ಗೋಪಾಲಕೃಷ್ಣ, ದಿವಂಗತ ಶರಣ್ ಶೆಟ್ಟಿಯವರ ಮಾತೃಶ್ರೀ ಪ್ರೇಮಾ, ದಿವಂಗತ ಶಿವರಾಜ್ ಕೋಡಿಕೆರೆ ಇವರ ಪೋಷಕರಾದ ರಾಜು ಕುಲಾಲ್ ಮತ್ತು ವಾರಿಜಾ, ಗೆಳೆಯರ ಬಳಗ ಸುರತ್ಕಲ್ ಇದರ ಅಧ್ಯಕ್ಷರಾದ ನಾಗೇಶ್ ಪೂಜಾರಿ, ಶನೀಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಮ್ ಶೆಟ್ಟಿ, ಜೋಕಟ್ಟೆ ಪಂಚಾಯತ್ ಸದಸ್ಯರಾದ ರವೀಂದ್ರ ತೋಕೂರು ಹಾಗೂ ಪ್ರಮುಖರಾದ ಶ್ರೀಧರ್ ತೋಕೂರು, ಮನೀಶ್ ಕೋಡಿಕೆರೆ ಉಪಸ್ಥಿತರಿದ್ದರು. ಮೊದಲಿಗೆ ದೀಪ ಬೆಳಗಿಸಿ ಬಲಿದಾನಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಹಿಂದುತ್ವಕ್ಕಾಗಿ ಉಸಿರು ಇರುವವರೆಗೂ ಶ್ರಮಿಸಿ ಎಲ್ಲರೊಂದಿಗೂ ಸ್ನೇಹಜೀವಿಗಳಾಗಿ ಬದುಕಿ ಭವಿಷ್ಯದಲ್ಲಿ ಉಜ್ವಲಿಸಬೇಕಾದ ಮಹಾನ್ ಹಿಂದೂ ಚೇತನ ಜಿಹಾದಿ ದುಷ್ಕರ್ಮಿಗಳ ಷಡ್ಯಂತ್ರಕ್ಕೆ ಬಲಿಯಾದ ಶಿವರಾಜ್ ಕೋಡಿಕೆರೆ ಮತ್ತು ತನ್ನ ಗೆಳೆಯನ ಬಲಿದಾನಕ್ಕೆ ಪ್ರತೀಕಾರದ ಸದ್ಗತಿಯನ್ನು ಸಮರ್ಪಿಸಿದ ಹಿಂದೂ ಕಣ್ಮಣಿ ಶರಣ್ ಶೆಟ್ಟಿ ತೋಕೂರು ಎರಡೂ ಅಮೂಲ್ಯ ರತ್ನಗಳು ಹರೆಯದ ಪ್ರಾಯದಲ್ಲಿಯೇ ವಿಧಿಯ ಕ್ರೂರ ಲೀಲೆಗೆ ಬಲಿಯಾಗಿ ವರುಷಗಳೇ ಸಂದರೂ ನೀವುಗಳು ಬದುಕಿದಷ್ಟು ದಿನ ಹಿಂದೂ ಸಮಾಜಕ್ಕೆ ಸಮರ್ಪಿಸಿದ ಸಮರ್ಪಣೆ ಚಿರಕಾಲ ಚಿರಾಯುವಾಗಿ ಉಳಿಸಲು ಪ್ರತಿವರ್ಷ ರಕ್ತದಾನ ಮಾಡಲಾಗುತ್ತಿದೆ.
ಸಂಸ್ಥೆಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.