Mangalore and Udupi news
Blog

ಬೈಂದೂರು : ಅಧ್ಯಯನಕ್ಕೆ ಬಂದು ಸರ್ಕಾರಿ ಶಾಲೆ ಮಕ್ಕಳಿಗೆ ಶೌಚಾಲಯ ಕಟ್ಟಿದ ವಿದೇಶಿಯರು…!!

ತಾವೇ ಕಲ್ಲು ಹೊತ್ತು ಸಿಮೆಂಟ್ ತುಂಬಿ ಶೌಚಾಲಯ ಕಟ್ಟಿದ ಫ್ರಾನ್ಸ್ ಮೂಲದ ಪ್ರಜೆಗಳು….

ಬೈಂದೂರು : ವಿದೇಶಿಗರು ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು, ಕೆಲವರು ಇಲ್ಲಿಯೇ ಕೆಲವು ತಿಂಗಳ ಕಾಲ ನೆಲೆಸುವುದು, ಇಲ್ಲಿಯ ಸಂಸ್ಕೃತಿಯನ್ನು ಕಲಿತು ಪಾಲಿಸುವುದನ್ನು ಕೇಳಿದ್ದೇವೆ. ಇಂಟರ್ನ್ ಶಿಪ್ ಉದ್ದೇಶಕ್ಕಾಗಿ ಫ್ರಾನ್ಸ್ ನಿಂದ ಬಂದಿದ್ದ ವಿದೇಶಿಗರ ತಂಡವೊಂದು ಬೈಂದೂರಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಶೌಚಾಲಯ ಕಟ್ಟಿಕೊಟ್ಟು ಸುದ್ದಿಯಾಗಿದ್ದಾರೆ.‌

ಹೌದು, ಫ್ರಾನ್ಸ್ ಮೂಲದ ಪ್ರಜೆಗಳು ಇಂಟರ್ನ್‌ಶಿಪ್‌ ಉದ್ದೇಶಕ್ಕಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕನ್ಯಾನ ಗ್ರಾಮದ ಕೂಡ್ಲು ಸರಕಾರಿ ಶಾಲೆಗೆ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುತ್ತ ಪರಿಸರ ಸ್ವಚ್ಛತೆಯನ್ನು ಹೇಳಿಕೊಡುತ್ತಾ ಎರಡು ತಿಂಗಳ ಕಾಲ ಇಲ್ಲಿ ಕಳೆದಿದ್ದಾರೆ. ಕೊನೆಗೆ ಇಲ್ಲಿಂದ ತೆರಳುವ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಏನಾದರೂ ಮಾಡಿಕೊಡಬೇಕೆಂದು ಹೇಳಿ, ಅಲ್ಲಿಗೆ ಅಗತ್ಯವಾಗಿದ್ದ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೆ, ಶೌಚಾಲಯ ಕಟ್ಟಡದ ನಿರ್ಮಾಣ ಕೆಲಸಕ್ಕೂ ಕೈಜೋಡಿಸಿದ್ದಾರೆ. ಸದ್ಯ ಇವರು ಮೇಸ್ತ್ರಿ ಕೆಲಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋವನ್ನು elkaani ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಶೀರ್ಷಿಕೆಯಲ್ಲಿ ಫ್ರಾನ್ಸ್ ದೇಶದಿಂದ ಇಂಟರ್ನ್‌ಶಿಪ್‌ಗಾಗಿ ನಮ್ಮ ಊರಿಗೆ ಬಂದವರು. ಸುಮಾರು ಎರಡು ತಿಂಗಳ ಕಾಲ ಬೈಂದೂರು ವಲಯದ ಗ್ರಾಮೀಣ ಪ್ರದೇಶದ ಹಳ್ಳಿಗಾಡಿನಲ್ಲಿ ಇದ್ದರು. ಕೂಡ್ಲು ಸರಕಾರಿ ಶಾಲಾ ವಿದ್ಯಾರ್ಥಿಗಳ ಜೊತೆ ಆಟಪಾಠದಲ್ಲಿ ಭಾಗಿಯಾಗಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ಸ್ಪಂದಿಸಿದ್ದಾರೆ. ಮಕ್ಕಳಿಗೆ ಪಾಠ ಪ್ರವಚನ ಮಾಡಿದ ಈ ಫ್ರಾನ್ಸ್ ದೇಶದ ನಾಗರೀಕರು ಇಲ್ಲಿನ ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಿದ್ದ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಬರೆಯಲಾಗಿದೆ.

Related posts

Leave a Comment