ದಿನಾಂಕ 16 ನೇ ಆಗಸ್ಟ್ ಶನಿವಾರ ಎಲ್ಲಿಂದಲೋ ದನವನ್ನು ಕದ್ದು, ಅದನ್ನು ಕಡಿದು ಮಾಂಸ ಮಾಡಿ ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಟಾಟಾ ಇಂಟ್ರಾ ವಾಹನ ಸಂಖ್ಯೆ KA19AE4759ದಲ್ಲಿ ಸಾಗಿಸುತ್ತಿದ್ದಾಗ ಬಜರಂಗದಳ ಗುರುಪುರ ಪ್ರಖಂಡದ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಹನದಲ್ಲಿ ಮೂವರು ದನಕಳ್ಳರಿದ್ದು ಓರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇಬ್ಬರು ಆರೋಪಿಗಳಾದ ಮಯ್ಯದ್ದಿ ಹಂಡೇಲ್/ಬಾವುದ್ದಿನ್, ಹಂಡೇಲ್ ಮನೆ, ಮೊಯಿದಿನ್ ಮಸ್ಜಿದ್ ಬಳಿ ಅಸ್ಮಾ ಮಂಜ್, ಪುತ್ತಿಗೆ ಗ್ರಾಮ, ಮೂಡಬಿದ್ರೆ ಮತ್ತು ಇನ್ನೋರ್ವ M.A ಮೊಹಮ್ಮದ್ ಶರೀಫ್ ಫಾತಿಮಾ ಮಂಝಿಲ್ ಬಡಗ ಮಿಜಾರ್ ತಾಲೂಕು ಮೂಡಬಿದ್ರೆ ಇವರನ್ನು ಬಂಧಿಸಲಾಗಿದ್ದು, . ಇವರು ಕುದ್ರೋಳಿಯ ನಿವಾಸಿ ಮುಸ್ತಾಕ್ ಕುದ್ರೋಳಿ ಮಂಗಳೂರು ಈತನಿಗೆ ಮಾಂಸ ಮಾರಾಟ ಮಾಡಲು ಕೊಂಡೊಯುತ್ತಿದ್ದುದಾಗಿ ತಿಳಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಸ್ಥಳದಲ್ಲೇ ಬಂಧಿಸಿ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ವಾಹನ ಹಾಗೂ ಅಂದಾಜು 07-08 ದನದ 450 ಕೆಜಿ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ತಪ್ಪಿಸಿಕೊಂಡ ಇನ್ನೋರ್ವ ಆರೋಪಿ ತೋಡಾರಿನ ಸಫರ್ ಎಂದು ಗುರುತಿಸಲಾಗಿದ್ದು, ಈತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಈತ ಹಾಗೂ ಕುದ್ರೋಳಿಯ ಮುಸ್ತಾಕ್ ಇಬ್ಬರನ್ನು ಕೂಡಾ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.



ಜಿಲ್ಲೆಯಲ್ಲಿ ಕೋಮು ವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ದಿಟ್ಟ ಕಾನೂನು ಪ್ರಕ್ರಿಯೆಗಳನ್ನು ಜಾರಿಗೊಳಿಸಿದ್ದರೂ ಕೂಡಾ ಪ್ರತಿದಿನ ಅವ್ಯಾಹತವಾಗಿ ಗೋಸಾಗಾಣಿಕೆ, ಗೋಮಾಂಸ ಸಾಗಾಟ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಗೋಸಾಗಾಟಗಾರರಿಗೆ ಪೊಲೀಸ್ ಇಲಾಖೆಯ ಯಾವುದೇ ಭಯ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.

