Mangalore and Udupi news
Blog

79ನೇ ಸ್ವಾತಂತ್ರ ದಿನಾಚರಣೆ: ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

ಈ ದೀಪಾವಳಿಗೆ ದೇಶದ ಜನತೆಗೆ ದೊಡ್ಡ ಗಿಫ್ಟ್ ಕೊಡ್ತೇವೆ; ಪ್ರಧಾನಿ ಮೋದಿ

ಇಂದು ಭಾರತದ 79ನೇ ಸ್ವಾತಂತ್ರ ದಿನಾಚರಣೆ. ದೇಶದೆಲ್ಲೆಡೆ ಸ್ವಾತಂತ್ರ ಸಂಭ್ರಮ ಜೋರಾಗಿದ್ದು, ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದರು. ಕೆಂಪುಕೋಟೆಗೆ ಪ್ರಧಾನಿಯನ್ನು ರಕ್ಷಣಾ ಸಚಿವ ಬರಮಾಡಿಕೊಂಡರು. ದೇಶದ ನೌಕಾಸೇನೆ, ವಾಯುಸೇನೆ, ಭೂಸೇನೆ ಪಡೆಗಳಿಂದ ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ ಅವರು ನಂತರ ಕೆಂಪು ಕೋಟೆಗೆ ತೆರಳಿ ಧ್ವಜಾರೋಹಣ ಮಾಡಿದರು.

1947ರ ಆಗಸ್ಟ್‌ 15ರಂದು ಭಾರತಕ್ಕೆ ಸ್ವಾತಂತ್ರ ಸಿಕ್ಕಿತ್ತು. ಸ್ವಾತಂತ್ರ ಸಿಕ್ಕಿದಾಗಿನಿಂದಲೂ ದೇಶದ ಪ್ರಧಾನಿಯಾಗಿರುವವರು ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಅದೇ ರೀತಿ ಪ್ರಧಾನಿ ಮೋದಿ ಈಗ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಈ ಬಾರಿಯ ಧ್ವಜರೋಹಣದ ಮೂಲಕ ಪ್ರಧಾನಿ ಮೋದಿ 12ನೇ ಬಾರಿ ಪ್ರಧಾನಿಯಾಗಿ ದೇಶದ ಧ್ವಜಾರೋಹಣ ಮಾಡಿದಂತಾಗಿದೆ. ಇದೇ ವೇಳೆ ಪ್ರಧಾನಿ ಅಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾದ ದೇಶದ ಯೋಧರನ್ನು ಗೌರವಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ರಾಷ್ಟ್ರದ ಹಿತದೃಷ್ಟಿಯಿಂದ ಸಿಂಧೂ ಒಪ್ಪಂದ ಸರಿಯಲ್ಲ, ಭಾರತದ ನೀರು ಶತ್ರು ದೇಶಗಳ ಹೊಲದಲ್ಲಿ ಹರಿಯುತ್ತಿದೆ. ನಮ್ಮ ದೇಶದ ಹೊಲಗಳಲ್ಲಿ ನಮ್ಮ ನೀರು ಹರಿಯಬೇಕು ಎಂದು ಪ್ರಧಾನಿ ಮೋದಿ ಹೇಳಿದರು.


ಆತ್ಮನಿರ್ಭರ ಎಂದರೆ ಅದು ನಮ್ಮ ಶಕ್ತಿ ಸಾಮರ್ಥ್ಯ, ಅದು ಕೇವಲ ಆಮದು ರಪ್ತು ಅಲ್ಲ, ದೇಶ ಅಭಿವೃದ್ಧಿಯಾಗಬೇಕಾದರೆ ಆತ್ಮನಿರ್ಭರತೆ ಅನಿವಾರ್ಯ. ಸ್ವಂತ ಶಕ್ತಿಯ ಮೇಲೆ ದೇಶ ಅವಲಂಬಿತವಾಗಬೇಕು. ಆಪರೇಷನ್ ಸಿಂದೂರ್‌ನಲ್ಲೇ ಆತ್ಮನಿರ್ಭರ ಭಾರತದ ಪ್ರದರ್ಶನವಾಗಿದೆ. ಆತ್ಮನಿರ್ಭರತೆಯಾಗದಿದ್ದರೆ ಆಪರೇಷನ್ ಸಿಂದೂರ್‌ ಯಶಸ್ವಿಯಾಗುತ್ತಿರಲಿಲ್ಲ. ಶತ್ರುವಿಗೆ ಯಾವ ಅಸ್ತ್ರ ಹೇಗೆ ಪ್ರಯೋಗವಾಗುತ್ತಿದೆ ಎಂಬುದು ಗೊತ್ತಾಗಲಿಲ್ಲ, ಇದು ತಂತ್ರಜ್ಞಾನದ ಶತಮಾನ ತಂತ್ರಜ್ಞಾನವೇ ಜೀವನ ಎಂದು ಪ್ರಧಾನಿ ಹೇಳಿದರು.

ಇಂದು ಇಡೀ ವಿಶ್ವ ಸೆಮಿಕಂಡಕ್ಟರ್‌ನತ್ತ ನೋಡುತ್ತಿದೆ. ನಾವು 4 ಹೊಸ ಘಟಕಗಳಿಗೆ ಹಸಿರು ನಿಶಾನೆ ತೋರಿದ್ದೇವೆ. ವರ್ಷದ ಅಂತ್ಯದಲ್ಲಿ ಸೆಮಿಕಂಡಕ್ಟರ್ ಭಾರತದಲ್ಲೇ ರೆಡಿಯಾಗುತ್ತದೆ. ಮೆಡ್ ಇನ್ ಇಂಡಿಯಾ ಚಿಪ್ ಸಿದ್ಧಗೊಳಲಿದೆ. ಭಾರತ ಅಣುಶಕ್ತಿಗೂ ಪ್ರಾಮುಖ್ಯತೆ ನೀಡುತ್ತಿದೆ. 10 ಹೊಸ ಅಣು ರಿಯಾಕ್ಟರ್‌ಗಳಿಗೆ ಅವಕಾಶ ನೀಡಿದ್ದೇವೆ. 2027ರಲ್ಲಿ ಭಾರತದ ಅಣುಶಕ್ತಿ 10 ಪಟು ಹೆಚ್ಚಾಗಲಿದೆ. ಪ್ರಕೃತಿ ಬಗ್ಗೆ ನಾವು ಸಂವೇದನಶೀಲರಾಗಿದ್ದೇವೆ. 2030ರ ಒಳಗೆ ಶೇಕಡಾ 50ರಷ್ಟು ಹಸಿರು ಶಕ್ತಿ ಗುರಿ ಮುಟ್ಟಲಿದ್ದೇವೆ. ದೇಶದಲ್ಲಿ ತೈಲ ಗ್ಯಾಸ್ ಖಜಾನೆ ತೆರೆಯುವ ಉದ್ದೇಶವಿದ್ದು, ಅದಕ್ಕಾಗಿ ಸಿದ್ಧತೆ ನಡೆಸಿದ್ದೇವೆ. ಆತ್ಮನಿರ್ಭರ ಭಾರತಕ್ಕಾಗಿ ಸಂಪತ್ತುಗಳನ್ನು ಬಳಸಿಕೊಳ್ಳಬೇಕಿದೆ. ಬಾಹ್ಯಾಕಾಶದಲ್ಲೂ ಭಾರತ ಆತ್ಮನಿರ್ಭರತೆ ಸಾಧಿಸಿದೆ. ಬಾಹ್ಯಾಕಾಶ ಕೇಂದ್ರ ಸ್ಥಾಪಿಸುವ ಹಾದಿಯಲ್ಲಿದ್ದೇವೆ. ಇಂಧನ, ಕೈಗಾರಿಕೆ, ತಂತ್ರಜ್ಞಾನ ಗಣಿಗಾರಿಕೆಯಲ್ಲಿ ಆತ್ಮನಿರ್ಭರತೆ ಆಗಬೇಕಿದೆ. ಎಂದು ಪ್ರಧಾನಿ ತಮ್ಮ ಸ್ವಾತಂತ್ರ ದಿನಾಚರಣೆಯ ಭಾಷಣದಲ್ಲಿ ಹೇಳಿದ್ದಾರೆ.


ಜಲವಿದ್ಯುತ್ ನ್ಯೂಕ್ಲಿಯರ್‌ನಲ್ಲೂ ಭಾರತ ಮುಂದಿದೆ. ಕಳೆದ 11 ವರ್ಷಗಳಲ್ಲಿ ಶೌರಶಕ್ತಿ ಹೆಚ್ಚಾಗಿದೆ. 2017ರ ಒಳಗೆ ವಿಕಸಿತ ಭಾರತದ ಗುರಿ ಇಟ್ಟಿದ್ದೇವೆ. 2030ರ ಒಳಗೆ ಕ್ಲೀನ್ ಎನರ್ಜಿ ಪಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Related posts

Leave a Comment