Mangalore and Udupi news
Blog

ಮಣಿಪಾಲ : ಮನೆಯಲ್ಲಿ ಗಾಂಜಾ ಮಾರಾಟ : ಆರೋಪಿ ವಶಕ್ಕೆ…!!

ಮಣಿಪಾಲ : ನಗರದ ಸಮೀಪ ವ್ಯಕ್ತಿಯೋರ್ವ ಮನೆಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸರಿಂದ ಬಂಧನವಾದ ಆರೋಪಿ ಸೀತಾರಾಮ ರೆಡ್ಡಿ ಎಂದು ಗುರುತಿಸಲಾಗಿದೆ.

ಪೊಲೀಸರು ಬಂಧಿತ ಆರೋಪಿಯಿಂದ ಸೊತ್ತುಗಳನ್ನು ವಶಪಡಿಸಿಕೊಂಡು ಆತನನ್ನು ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ವಿವರ : ದಿನಾಂಕ: 08/10/2025 ರಂದು 19:00 ಗಂಟೆಗೆ ಠಾಣೆಯಲ್ಲಿರುವಾಗ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ರಾಜೀವನಗರ ಎಂಬಲ್ಲಿ ಮನೆಯಲ್ಲಿ ಗಾಂಜಾ ಇಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್‌ ಉಪ ನಿರೀಕ್ಷಕರಾದ ಅಕ್ಷಯಕುಮಾರಿ ಎಸ್.‌ಎನ್‌ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿ ಸೀತಾರಾಮ ರೆಡ್ಡಿ ತೌಟರೆಡ್ಡಿ(21), ತಂದೆ: ವಿಜಯಭಾಸ್ಕರ ರೆಡ್ಡಿ ತೌಟರೆಡ್ಡಿ ವಾಸ: ಪ್ಲಾಟ್‌ ನಂಬ್ರ: 6 ವೆಸ್ಟ್‌ ಮಾರುತಿ ನಗರ, ಬೊಡುಪ್ಪಲ್‌, ಘಟ್ಕೇಸ್ಕರ್‌ ಮಂಡಲ್‌, ಬೊಡುಪ್ಪಲ್‌ ತಾಲೂಕು ರಂಗರೆಡ್ಡಿ ಜಿಲ್ಲೆ, ಆಂದ್ರಪ್ರದೇಶ ರಾಜ್ಯ, ಹಾಲಿ ವಿಳಾಸ: ಮಾತಾಪಿತಾ, ರಾಜೀವನಗರ, 80 ಬಡಗಬೆಟ್ಟು, ಉಡುಪಿ ಇತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ತಾನು ಮೇಘಾಲಯದಿಂದ ಆನ್‌ಲೈನ್‌ ಆಪ್‌ (ರೆಡಿಟ್)‌ ಮುಖಾಂತರ ಗಾಂಜಾ ಮಾದಕ ವಸ್ತುಗಳನ್ನು ಅಂಚೆ ಮುಖೇನ ಖರೀದಿ ಮಾಡಿ ಮಣಿಪಾಲ ಹಾಗೂ ಉಡುಪಿ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪರಿಚಯಸ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿರುವುದಾಗಿ ಹೇಳಿರುತ್ತಾನೆ. ಆರೋಪಿಯ ವಶದಲ್ಲಿದ್ದ ಎರಡು ಪಾರ್ಸೆಲ್‌ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಡೈಪರ್‌ಗಳ ಮಧ್ಯದಲ್ಲಿ ಒಟ್ಟು ಮೂರು ಪ್ಯಾಕ್‌ ಏರ್ ಜಿಪ್ ಬ್ಯಾಗ್‌ ನಲ್ಲಿ ಸುಮಾರು 01 ಕೆಜಿಗೂ ಹೆಚ್ಚು ಗಾಂಜಾ ಇರುವುದನ್ನು ಕಂಡು ಬಂತು. ಸದ್ರಿ ಪಾರ್ಸೆಲ್‌ ಪ್ಲಾಸ್ಟಿಕ್‌ ಕವರ್‌ ನಲ್ಲಿ ಇನ್ನೊಂದು ಏರ್‌ ಜಿಪ್ ಕವರ್‌ ಇದ್ದು ಅದರಲ್ಲಿ ಖಾಲಿ ಪೇಪರ್‌ ನಲ್ಲಿ ಗಾಂಜಾವನ್ನು ಹಾಕಿ ಸುತ್ತಿದ ಎರಡು ಪ್ಯಾಕ್‌ ಗಳು ಹಾಗೂ ಖಾಲಿ ಎರಡು ಏರ್‌ ಜಿಪ್‌ ಕವರ್‌ ಗಳು, ಟೇಬಲ್‌ ಮೇಲಿನ ಗಾಂಜಾವನ್ನು ಎಳೆಯುವ ಎರಡು ಬಾಂಗ್ ಹಾಗೂ 1 ಐಫೋನ್‌ ಹಾಗೂ ನಗದು ರೂ. 3180/- ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಗಾಂಜಾದ ಅಂದಾಜು ಮೌಲ್ಯ ರೂ 60000/- ಆಗಬಹುದು. ಆರೋಪಿಯ ಮೊಬೈಲ್‌ನ ಅಂದಾಜು ಮೌಲ್ಯ 75000/- ರೂ ಆಗಬಹುದು.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 183/2025 ಕಲಂ. : 8(C), 20(b) (ii)(b) NDPS Actರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

Leave a Comment