ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಯುತ ಕೃಷ್ಣ ಹೆಬ್ಬಾರ್, ಮಂಗಳೂರು ಮಹಾನಗರಪಾಲಿಕೆಯ ಜೂನಿಯರ್ ಇಂಜಿನಿಯರ್ ಕುಮಾರಿ ಶ್ರುತಿ, ಮಾಜಿ ಉಪ ಮೇಯರ್ ಶ್ರೀಮತಿ ವೇದಾವತಿ, ಸಮಾಜ ಸೇವಕರಾದ ಶ್ರೀಯುತ ರಮೇಶ್ ಅಳಪೆ,  ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದೀಪಕ್ ಕುಳಾಯಿ, ಉಪಾಧ್ಯಕ್ಷರಾದ ಶ್ರೀಯುತ  ಮಣಿಕಂಠ, ಶ್ರೀಯುತ ಜಯಶಂಕರ್, ಗೌರವ ಸಲಹೆಗಾರರಾದ ಶ್ರೀಯುತ ಬಿ. ಬಿ. ರೈ, ಶ್ರೀಯುತ ಶಂಭು ಮೂಲ್ಯ, ಕೋಶಾಧಿಕಾರಿ ಶ್ರೀಯುತ ಹರ್ಷಿತ್ ಕುಳಾಯಿ, ಆರೋಗ್ಯ ಇಲಾಖೆಯ ಮೇಲ್ವಿಚಾರಕರಾದ ಶ್ರೀಯುತ ಸುಭಾಶ್ ಮೊದಲಾದವರು  ವೇದಿಕೆಯಲ್ಲಿ  ಉಪಸ್ಥಿತರಿದ್ದರು.

ಸ್ಪಂದನಾ ಸಂಸ್ಥೆಯ ಈ ಕಾರ್ಯಕ್ರಮವನ್ನು ಮುಕ್ತ ಕಂಠದಿಂದ ಹೊಗಳಿದ ಕುಮಾರಿ ಶ್ರುತಿಯವರು ಕಸ ವಿಲೇವಾರಿ ಮಾಡುವ ಪೌರ ಕಾರ್ಮಿಕರ ಕೆಲಸದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಸರ್ವರಿಗೂ ದೀಪಾವಳಿ ಶುಭಾಶಯ ತಿಳಿಸಿದರು.
ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಯುತ ಕೃಷ್ಣ ಹೆಬ್ಬಾರ್ ಮಾತನಾಡಿ ಪೌರ ಕಾರ್ಮಿಕರಿಗೆ ಶುಭ ಹಾರೈಸುವ ಜೊತೆಗೆ ಸಂಸ್ಥೆಯ ಕೆಲಸವನ್ನು ಶ್ಲಾಘಿಸಿದರು.
ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಯುತ ಯಜ್ಞೇಶ್ ಐತಾಳ್ ಪೌರ ಕಾರ್ಮಿಕರಿಗೆ ಅವರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಹಿತ ನುಡಿಗಳನ್ನು ತಿಳಿಸಿದರು.
ಕೊನೆಯಲ್ಲಿ ಸರ್ವರಿಗೂ ಫಲಹಾರದ ವ್ಯವಸ್ಥೆ ಮಾಡಲಾಗಿತ್ತು.
previous post


