Mangalore and Udupi news
Blog

ಫ್ಲೈವುಡ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ : ಓರ್ವ ಮೃತ್ಯು, ಹಲವರು ಗಂಭೀರ…!!

ಕಾಸರಗೋಡು: ಅನಂತಪುರದ ಫ್ಲೈವುಡ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ‌ ವರದಿಯಾಗಿದೆ.

ಸೋಮವಾರ ಸಂಜೆ ಸುಮಾರು ಗಂಟೆ 7ರಿಂದ 7.30ರೊಳಗೆ ನಡೆದ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಒಬ್ಬ ವಲಸೆ ಕಾರ್ಮಿಕ ಮೃತಪಟ್ಟಿದ್ದಾರೆ.

ಅನಂತಪುರ ಬಳಿಯ ಕಣ್ಣೂರು ಕುನ್ನಿಲ್ ಸಮೀಪದ ಡೆಕ್ಕೂರು ಫ್ಲೈವುಡ್ ಕಾರ್ಖಾನೆಯಲ್ಲಿನ ಬಾಯ್ಲರ್ ಸ್ಪೋಟಗೊಂಡಿದ್ದು ವಿವಿದೆಡೆ ಬೆಂಕಿ ಹರಡಿತು. 300 ರಷ್ಟು ಕಾರ್ಮಿಕರು ಸ್ಫೋಟ ಸಮಯದಲ್ಲಿ ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ.

ಸ್ಪೋಟದ ಪರಿಣಾಮ ಪೆರಾಲ್ ಕಣ್ಣೂರು, ಸಿದ್ದಿಬಯಲು ಸಮೀಪದವರೆಗೆ ಇದರ ಅಪಾಯ ಸಂಭವಿಸಿದೆ ಎಂದು ವರದಿ‌ ತಿಳಿಸಿದೆ.

Related posts

Leave a Comment