Mangalore and Udupi news
Blog

ಮಂಗಳೂರು : ಧರ್ಮಸ್ಥಳ ಪ್ರಕರಣ : ಕಾಡಿನಲ್ಲಿ ಶೋಧ ನಡೆಸಿ ತೆರಳಿದ ಎಸ್‌ಐಟಿ ತಂಡ…!!

ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತಂಡ ಇಂದು ನೇತ್ರಾವತಿ ಸ್ಥಾನಘಟ್ಟದ ಬಳಿಯ ಕಾಡಿನಲ್ಲಿ ಶೋಧ ನಡೆಸಿ ಸ್ಥಳದಿಂದ ತೆರಳಿದೆ.

ಇಂದು ಯಾವುದೇ ಮೃತದೇಹದ ಕುರುಹು ಪತ್ತೆಯಾಗಿಲ್ಲ. 13ನೇ ಸ್ಪಾಟ್‌ನಲ್ಲಿ ಇಂದು ಗುಂಡಿ ಅಗೆಯುವ ಕಾರ್ಯ ನಡೆಸಲಾಗಿಲ್ಲ.

ಮಧ್ಯಾಹ್ನದ ಬಳಿಕ ಎಸ್‌ಐಟಿ ಅಧಿಕಾರಿ ಜಿತೇಂದ್ರ ಕುಮಾ‌ರ್ ದಯಾಮ ಅವರು ಸಾಕ್ಷಿ ದೂರುದಾರ ಹಾಗೂ ಎಸ್‌ಐಟಿ ತಂಡದೊಂದಿಗೆ ನೇತ್ರಾವತಿ ಸ್ಥಾನಘಟ್ಟದ ಸಮೀಪವಿರುವ 11ನೇ ಸ್ಪಾಟ್ ಬಳಿಯ ಅರಣ್ಯ ಪ್ರದೇಶಕ್ಕೆ ತೆರಳಿದೆ. ಸಂಜೆಯವರೆಗೆ ಕಾಡಿನಲ್ಲಿದ್ದ ತಂಡ ಇದೀಗ ವಾಪಸ್ ಆಗಿದೆ.

ಸಾಕ್ಷಿದೂರುದಾರ ಗುರುತಿಸಿರುವ 13ನೇ ಸ್ಪಾಟ್‌ನ ಉತ್ಪನನ ಕಾರ್ಯ ಬಾಕಿಯಿದ್ದು, ಅಲ್ಲಿಗೆ ಬ್ಯಾರಿಕೇಡ್ ಅಳವಡಿಸಿ ಯಾರು ತೆರಳದಂತೆ ಬಂದೋಬಸ್ತ್ ಮಾಡಲಾಗಿದೆ.

Related posts

Leave a Comment