Mangalore and Udupi news
Blog

ಕಾರ್ಕಳ : ನಿಟ್ಟೆಯಲ್ಲಿ ಶ್ರೀಗಂಧದ ಮರ ಕಳ್ಳತನ : ಆರೋಪಿಗಳು ಪೊಲೀಸ್ ವಶಕ್ಕೆ

ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ಎಂಬವರ ತೋಟದಲ್ಲಿ ಬೆಳೆಸಿದ್ದ 4 ಲಕ್ಷ ಮೌಲ್ಯದ ಒಟ್ಟು 9 ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ತನಿಖೆಯನ್ನು ಕೈಗೆತ್ತಿಕೊಂಡ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಕಾನೂನು ಸುವ್ಯವಸ್ತೆ ಮತ್ತು ಸಂಚಾರ ವಿಭಾಗದ ಪಿ.ಎಸ್.ಐ. ಪ್ರಸನ್ನ ಎಮ್ ಎಸ್ ಮತ್ತು ತನಿಖಾ ವಿಭಾಗದ ಪಿ.ಎಸ್.ಐ. ಸುಂದರ ರವರ ತಂಡವು, ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಗಣೇಶ್, ಸಂತೋಷ, ಮೊಯ್ದೀನ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಕಳುವಾದ ಶ್ರೀ ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ವಿಚಾರಣಾ ಸಮಯ ಆರೋಪಿಗಳು ಶಿರ್ವಾ ಠಾಣಾ ವ್ಯಾಪ್ತಿಯಲ್ಲಿ ಕೂಡಾ ಶ್ರೀ ಗಂಧದ ಮರಗಳನ್ನು ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಪ್ರಕರಣದ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಹರಿರಾಮ್ ಶಂಕರ್ ರವರ ಆದೇಶದಂತೆ ಕಾರ್ಕಳ ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರೀಯಂವದ ಐ.ಪಿ.ಎಸ್ ರವರ ನಿರ್ದೇಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ,ಆರ್ ರವರ ಮಾರ್ಗದರ್ಶನದಲ್ಲಿ, ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‌ಐಗಳಾದ ಪ್ರಸನ್ನ ಎಮ್ ಎಸ್, ಸುಂದರ ಮತ್ತು ಸಿಬ್ಬಂದಿಯವರಾದ ಎ.ಎಸ್.ಐ ಪ್ರಕಾಶ್, ಎ.ಎಸ್.ಐ ಸುಂದರ ಗೌಡ, ಸಿಬ್ಬಂದಿಯವರಾದ ರುದ್ರೇಶ್, ಚಂದ್ರಶೇಖರ, ಶ್ರೀಮತಿ ಸುಮಿತ್ರ, ಮಹಾಂತೇಶ್, ಸೋಮಶೇಖರ ಎಸ್,ಜಿ, ರವೀಂದ್ರ, ಆನಂದ, ಶ್ರೀಮತಿ ಶಶಿಕಲಾರವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Related posts

Leave a Comment