ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಬಸ್ ಕಂಡಕ್ಟರ್ ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸೆಲಿನಾ ಬಸ್ ಕಂಡಕ್ಟರ್ ಕಾರ್ಯನಿರ್ವಹಿಸುತ್ತಿದ್ದ ಸಲಾಂ ರವರ ಬೈಕ್, ಮೊಬೈಲ್, ವಾಚ್ ಅನಾಥವಾಗಿ ಗುರುಪುರ ನದಿ ಬಳಿ ಪತ್ತೆಯಾಗಿದೆ.
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನುರಿತ ಈಜುಗಾರರ ತಂಡದ ಸಹಕಾರದಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆಯಲಾಯಿತು.