ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಂತೋಷ ಎಂದು ಗುರುತಿಸಲಾಗಿದೆ.
ಅಮಾಸೆಬೈಲು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿ ಮಂಜುನಾಥ ಗೊಲ್ಲ, ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು ಇವರು ಹೊಸಂಗಡಿ ಗ್ರಾಮದ ಸಿ.ಎ. ಬ್ಯಾಂಕಿನ ಕಟ್ಟಡದಲ್ಲಿ ಶ್ರೀಕೃಷ್ಣ ಜ್ಯೂವೆಲರಿ ಹೊಂದಿದ್ದು ದಿನಾಂಕ: 03-11-2024 ರಂದು ಭಾನುವಾರ ಬೆಳಿಗ್ಗೆ 11:00 ಗಂಟೆಗೆ KA -15-N-5697ರಲ್ಲಿ ಸಂತೋಷ ಎಂದು ಹೆಸರು ಹೇಳಿಕೊಂಡು ಬಂದ ವ್ಯಕ್ತಿ ಗಿಪ್ಟ್ ಕೊಡುವ ಬಗ್ಗೆ 2 ಚಿನ್ನದ ಉಂಗುರಗಳನ್ನು ಖರೀದಿ ಮಾಡಿದ್ದು ಅದರ ಮೌಲ್ಯ 30,000/- ಆಗಿದ್ದು ಅದನ್ನು ಆತನ ಬ್ಯಾಂಕ್ ನಿಂದ Neft ಮೂಲಕ ಹಣ ಹಾಕಿರುವುದಾಗಿ ಮೊಬೈಲ್ ಪೋನ್ ತೋರಿಸಿ ಉಂಗುರಗಳನ್ನು ಖರೀದಿ ಮಾಡಿಕೊಂಡು ಹೋಗಿದ್ದು ನಂತರ ಹಣ ಖಾತೆಗೆ ಜಮಾ ಆಗದ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗಿ Network Issu ಎಂದು ಹೇಳಿ ನಂತರ ಅಗುವುದಾಗಿ ತಿಳಿಸಿ ಹಾಗೇ 2ದಿನ ಬಿಟ್ಟು ಪುನ: ವಿಚಾರಿಸಿದಾಗ ನಾಳೆ ಕೊಡುತ್ತೇನೆ. ನಾಡಿದ್ದು ಕೊಡುತ್ತೇನೆ. ಎಂದು ಈ ತನಕ ಹೇಳಿಕೊಂಡು ಬಂದಿರುತ್ತಾರೆ. ಅದರೆ ಈ ವರೆಗೂ ಹಣವನ್ನು ಅಥವಾ ಚಿನ್ನ ಕೂಡ ವಾಪಸ್ಸು ನೀಡಿರುವುದಿಲ್ಲ ಸಂತೋಷ ಎಂಬ ವ್ಯಕ್ತಿಯ ಬಗ್ಗೆ ವಿಚಾರಿಸಲಾಗಿ ಆತ ಹೆಸರು ಪ್ರವೀಣ ಎಂದು ತಿಳಿದು ಬಂದಿರುತ್ತೇದೆ. ಮೋಸ ಮಾಡುವ ಉದ್ದೇಶದಿಂದ ಉಂಗುರ ಖರೀದಿ ನೆಪದಲ್ಲಿ ಪಿರ್ಯಾದಿಯ ಅಂಗಡಿಗೆ ಬಂದು ಚಿನ್ನ ಖರೀದಿಸಿ ಪದೇ ಪದೇ ಹಣ ಕೊಡುತ್ತೇನೆ ಎಂದು ಸತಾಯಿಸಿ ಈ ತನಕ ಕೊಡದೆ ನಂಬಿಸಿ ಮೋಸ ಮಾಡಿರುತ್ತಾನೆ ಎಂಬಿತ್ಯಾದಿಯಾಗಿದ್ದು” ಆರೋಪಿಯ ವಿರುದ್ಧ ಅಮಾಸೆಬೈಲು ಠಾಣಾ ಅಕ್ರ: 26-2025 ಕಲಂ 318(2),(4), 319(2) BNS 2023 ರಂತೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಆರೋಪಿ ಪ್ರವೀಣ ತಲೆಮರೆಸಿಕೊಂಡಿರುತ್ತಾನೆ.
ಈ ದಿನ ದಿನಾಂಕ:29/09/2025 ರಂದು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ KA -15-N-5697 ಕಾರು ಹಾಗೂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.