Mangalore and Udupi news
Blog

ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ : ಎರಡು ಲಾರಿಗಳು ವಶಕ್ಕೆ…!!

ವಿಟ್ಲ : ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಿಟ್ಲ ಠಾಣಾ ಪೊಲೀಸ್ ಉಪ-ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಇoದು ಅಪರಾಹ್ನ ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದೆ ಉಕ್ಕಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ KA 01 AJ 9542 & KA 50 AF 3229 ನೋಂದಣಿ ಸಂಖ್ಯೆಯ ಎರಡು ಲಾರಿಗಳನ್ನು ತಪಾಸಣೆ ನಡೆಸಲಾಗಿ ಅದರಲ್ಲಿ ತಲಾ 500 ಕೆಂಪು ಕಲ್ಲುಗಳಿದ್ದು, ಹಾಗೂ KA 01 AJ 9542 ನೇ ಲಾರಿಗೆ ಕೇರಳ ರಾಜ್ಯದ ಪೆರ್ಲ ಎಂಬಲ್ಲಿಂದ ಕಲ್ಲುಗಳನ್ನು ಜಾಫರ್ ಎಂಬುವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ, KA 50 AF 3229 ನೇ ಲಾರಿಯಲ್ಲಿ ಕೇರಳ ರಾಜ್ಯದ ಧರ್ಮತ್ತಡ್ಕ ಎಂಬಲ್ಲಿಂದ ನಾಸೀರ್ ಎಂಬುವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ ತಿಳಿಸಿರುತ್ತಾರೆ.

ಸದ್ರಿ ಲಾರಿಗಳನ್ನು ಹಾಗೂ ಚಾಲಕರುಗಳನ್ನು ವಶಕ್ಕೆ ಪಡೆದು, ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಕಳ್ಳತನದಿಂದ ತುಂಬಿಸಿಕೊಂಡು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Related posts

Leave a Comment