ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಇಬ್ಬರು ವ್ಯಕ್ತಿಗಳು ಹಿಂಸಾತ್ಮಕವಾಗಿ ಜಾನುವಾರುಗಳನ್ನು ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಕಾಪು ನಿವಾಸಿ ಮೆಹಬೂಬ ಸಾಹೇಬ್ ಹಾಗೂ ಸುಳ್ಯದ ನಿವಾಸಿ ಪದ್ಮನಾಭ ಎಂದು ತಿಳಿದು ಬಂದಿದೆ.
ಪ್ರಕರಣದ ಸಾರಾಂಶ : ವಿಠ್ಠಲ ಮಲವಡಕರ, ಪಿಎಸ್‌ಐ, ಹಿರಿಯಡ್ಕ ಪೊಲೀಸ್ ಠಾಣೆ ಇವರು ದಿನಾಂಕ:30/07/2025 ರಂದು ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಹಗಲು ಠಾಣಾ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂದ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ ಸಮಯ ಸುಮಾರು 12:10 ಗಂಟೆಗೆ ಉಡುಪಿ ತಾಲೂಕು ಆತ್ರಾಡಿ ಗ್ರಾಮದ ಪರೀಕ ಶಿವಗುಂಡಿ ಎಂಬಲ್ಲಿರುವ ಮಣ್ಣು ರಸ್ತೆಯಲ್ಲಿ ಮೇಯುತ್ತಿದ್ದ 2 ಜಾನುವಾರುಗಳನ್ನು ಆರೋಪಿತರುಗಳಾದ 1) ಮೆಹಬೂಬ ಸಾಹೇಬ್(65 ವರ್ಷ) ಮೂಡಬೆಟ್ಟು ಗ್ರಾಮ ಕಾಪು ತಾಲೂಕು. 2)ಪದ್ಮನಾಭ (57 ವರ್ಷ), ಹೊಸಹೊಳಿಕೆ ಗ್ರಾಮ ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರು ಕಳವು ಮಾಡಿ KA 07 5094 ನೇ ಪಿಕಪ್ ವಾಹನದಲ್ಲಿ ಅವುಗಳನ್ನು ಹಿಂಸೆಯಾಗುವ ರೀತಿಯಲ್ಲಿ ತುಂಬಿಸಿಕೊಂಡು ವಧೆ ಮಾಡುವ ಬಗ್ಗೆ ಕಸಾಯಿಖಾನೆಗೆ ಮಾರಾಟ ಮಾಡಲು ಕೊಂಡು ಹೋಗುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 53/2025 ಕಲಂ 303(2) ಬಿಎನ್‌ಎಸ್ ಮತ್ತು ಕಲಂ 11(1)(ಡಿ) ಪ್ರಾಣಿಹಿಂಸಾ ಪ್ರತಿಬಂಧಕ ಕಾಯ್ದೆ ಮತ್ತು ಕಲಂ 4,5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಾಣಾ ಆದ್ಯಾದೇಶ 2020 ನಂತೆ ಪ್ರಕರಣ ದಾಖಲಾಗಿರುತ್ತದೆ.