ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸಮುದ್ರದ ಅಳಿವೆ ಅಂಚಿನಲ್ಲಿ ದೋಣಿ ಮುಗುಚಿ ನಾಲ್ವರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಎರಡು ಮಂದಿಯನ್ನು ರಕ್ಷಿಸಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ.ಈ ಘಟನಾ ಸ್ಥಳಕ್ಕೆ ಕರಾವಳಿ ಕಾವಲು ಪಡೆ ಪೋಲಿಸ್ ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು, ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಜನರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಒಟ್ಟು ಆರು ಜನರಿದ್ದ ದೋಣಿ ಮೀನುಗಾರಿಕೆಗೆ ಸಾಗುವಾಗ ಅಲೆಯ ರಭಸಕ್ಕೆ ಮಗುಚಿದೆ. ನಾಲ್ಕು ಜನ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.
ಭಟ್ಕಳದ ಮನೋಹರ ಈರಯ್ಯ ಮೊಗೇರ ( 31)ಬೆಳೆ ಬಂದರ್ ನ ಜಾಲಿ ರಾಮ ಮಾಸ್ತಿ ಖಾರ್ವಿ (43) ಎಂವರನ್ನು ರಕ್ಷಿಸಿದ್ದಾರೆ
ಜಾಲಿ ಕೋಡಿಯ ರಾಮಕೃಷ್ಣ ಮಂಜು ಮೊಗೇರ(40), ಅಳ್ವೆಕೋಡಿಯ ಸತೀಶ್ ತಿಮ್ಮಪ್ಪ ಮೊಗೇರ (26), ಗಣೇಶ್ ಮಂಜುನಾಥ ಮೊಗೇರ (27), ಅಳ್ವೆಕೋಡಿ ಮುಗ್ರಿ ಮನೆಯ ಕನ್ನಡ ಶಾಲೆಯ ನಿಶ್ಚಿತ ಮೊಗೇರ (30) ಈ ನಾಲ್ಕು ಜನ ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋದ ಕಾರ್ಯ ನಡೆಸುತ್ತಿದ್ದಾರೆ