ಕಾರ್ಕಳ: ಸಾಣೂರಿನಲ್ಲಿ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಖಾಸಗಿ ಬಸ್ ಡಿಕ್ಕಿಯಾಗಿ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಗಾಯಾಳುವನ್ನು ಇರ್ವತ್ತೂರು ಗ್ರಾಮ ನಿವಾಸಿ ನಂದಾ ಅತಿಕಾರಿ ಎಂದು ಗುರುತಿಸಲಾಗಿದೆ.ಇವರು ಮಂಗಳೂರಿನಿಂದ ಬಂದ ಬಸ್ಸಿಳಿದು, ರಸ್ತೆ ದಾಟಲು ನಿಂತಿದ್ದ ವೇಳೆ ಘಟನೆ ನಡೆದಿದೆ.ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
previous post

