Mangalore: ಸುರತ್ಕಲ್‌ನ ದೀಪಕ್ ಬಾರ್ ಬಳಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಅ.23 ರ ರಾತ್ರಿ ವರದಿಯಾಗಿದೆ.ಮುಕ್ಷಿದ್, ನಿಜಾಮ್ ಮತ್ತು ಇತರ ಇಬ್ಬರು ಬಾರ್‌ಗೆ ಹೋಗಿ ಮದ್ಯ ಸೇವನೆ ಮಾಡುತ್ತಿದ್ದ ಸಂದರ್ಭ ಅಲ್ಲಿದ್ದ ನಾಲ್ಕು ಜನರ ತಂಡದ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಈ ಸಂದರ್ಭ ಓರ್ವ ಮುಕ್ಷಿದ್ ಹೊಟ್ಟೆಯ ಮತ್ತು ಕಿವಿಯ ಭಾಗಕ್ಕೆ ಫ್ಲೆಕ್ಸ್ ಕಟ್ ಮಾಡಲು ಬಳಸುವ ಚಾಕುವಿನಿಂದ ಇರಿದಿರುವುದಾಗಿ ವರದಿಯಾಗಿದ್ದು, ನಿಜಾಮ್‌ನ ಕೈಗೂ ಗಾಯವಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಸುರ್ಕಲ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ 307 ರ ಅಡಿ ಪ್ರಕರಣ ದಾಖಲಾಗಿದೆ. ಗಾಯಾಳುಗಳ ಮಾಹಿತಿ ಪ್ರಕಾರ ಹಲ್ಲೆ ಮಾಡಿದವರನ್ನು ಗುರುರಾಜ್, ಅಲೆಕ್ಸ್ ಸಂತೋಷ್, ಸುಶಾಂತ್, ನಿತಿನ್ ಎಂದು ಗುರುತಿಸಲಾಗಿದೆ. ಇವರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ ಸೆಕ್ಷನ್ 307) ಪ್ರಕರಣ ದಾಖಲು ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಘಟನೆ ವಿವರ ಹಾಗೂ ಆರೋಪಿಗಳ ಗುರುತು ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.
ಮುಕ್ಷಿದ್ ಮತ್ತು ನಿಝಾಮ್ ಹಾಗೂ ಇಬ್ಬರು ಸ್ನೇಹಿತರು ಬಾರ್‌ಗೆ ಹೋಗಿ ಮದ್ಯಪಾನ ಮಾಡುತ್ತಿದ್ದರು, ಆಗ ಅಲ್ಲಿಗೆ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳೊಂದಿಗೆ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿದೆ.
ಬಾರ್‌ನಿಂದ ಹೊರಗೆ ಬಂದ ನಂತರವೂ ಈ ಜಗಳ ಮುಂದುವರಿದಿದೆ. ನಂತರ ಚಾಕು ಇರಿತ ನಡೆದಿದೆ. ಮುಕ್ಷಿದ್ ಅವರ ಗಾಯವು ಗಂಭಿರ ಸ್ವರೂಪದಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿದ್ದು, ರಾತ್ರೋರಾತ್ರಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ರಾತ್ರಿಯೇ ಆರೋಪಿಗಳನ್ನು ಪತ್ತೆ ಹಚ್ಚಲು ಹೊರಟಿದ್ದು, ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. “ಆರೋಪಿಗಳ ಪತ್ತೆಗಾಗಿ ತಂಡಗಳು ನಿರಂತರ ಕಾರ್ಯಾಚರಣೆ ಮುಂದುವರಿಸಿದ್ದು, ಶೀಘ್ರದಲ್ಲಿಯೇ ಬಂಧನ ಮಾಡಲಾಗುವುದುʼ ಎಂದು ಆಯುಕ್ತರು ಹೇಳಿದ್ದಾರೆ.

