ಕಾಪು: ಕಾಪು ಸಮೀಪ ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ ಎದುರು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಇನ್ನಂಜೆ ಸ್ಟೇಷನ್ ಮಾಸ್ಟರ್ ಸ್ಥಳಕ್ಕೆ ಹೋಗಿ ನೋಡಿದಾಗ ಇನ್ನಂಜೆ ರೈಲ್ವೆ ಸ್ಟೇಷನ್ ಉತ್ತರಕ್ಕೆ ಸುಮಾರು 1 ಕಿ.ಮೀ ದೂರದಲ್ಲಿ ಓರ್ವ ವ್ಯಕ್ತಿಯ ಮೃತ ದೇಹವು ರೈಲ್ವೆ ಹಳಿಯ ಮೇಲೆ ಛಿದ್ರ ಛಿದ್ರವಾಗಿ ಬಿದ್ದಿರುವುದು ಕಂಡುಬಂದಿದೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
previous post
next post

