Mangalore and Udupi news
Blog

ಬೆಳ್ತಂಗಡಿ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ; ಆರೋಪಿಯ ಬಂಧನ

ಬೆಳ್ತಂಗಡಿ:ಕುತ್ಲೂರಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣದ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಇತ್ತೆ ಬರ್ಪೆ ಅಬೂಬಕರ್(71) ಎಂದು ತಿಳಿದು ಬಂದಿದೆ.

ನಾರವಿ ಗ್ರಾಮದ ಕುತ್ಲೂರಿನ ಮಂಜು ಶ್ರೀ ನಗರದ ಶಿಕ್ಷಕ ಅವಿನಾಶ್‌ ಎಂಬವರ ಮನೆಯಲ್ಲಿ ಅ.2 ರಿಂದ ಅ.6ರ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ವೇಣೂರು ಪೊಲೀಸ್‌ ಠಾಣೆಗೆ ಸಬ್‌ ಇನ್ಸೆಕ್ಟ‌ರ್ ಓಮನ ಮತ್ತು ತಂಡ ನ.11 ರಂದು ರಾತ್ರಿ ವೇಣೂರು ಕುಂಭಶ್ರೀ ಬಳಿ ವಾಹನ ತಪಾಸಣೆ ಮಾಡುವ ವೇಳೆ ಅನುಮಾನಾಸ್ಪದವಾಗಿ ಸ್ಕೂಟರ್ ವಾಹನದಲ್ಲಿ ಬರುತ್ತಿದ್ದ ಇತ್ತೆ ಬರ್ಪೆ ಅಬೂಬಕ‌ರ್ ನನ್ನು ತಡೆದು ನಿಲ್ಲಿಸಿ ವಾಹನದ ದಾಖಲೆ ಮತ್ತು ವ್ಯಕ್ತಿಯನ್ನು ಪರಿಶೀಲನೆ ವೇಳೆ ಮಂಗಳೂರಿನಲ್ಲಿ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ವೇಣೂರು ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ ನಾರವಿಯ ಕುತ್ಲೂರಿನ ಅವಿನಾಶ್‌ ಮನೆಯಲ್ಲಿ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿರುವುದಾಗಿ ತಿಳಿದು ಬಂದಿದೆ. ಆರೋಪಿಯನ್ನು ನ.12 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Related posts

Leave a Comment