Mangalore and Udupi news
Blog

ಉಪ್ಪಿನಂಗಡಿ: ಗೋವು ಕದ್ದು ಮಾಲಿಕನ ಜಾಗದಲ್ಲೇ ಮಾಂಸ ವಿಲೇ ಮಾಡಿದ ಖದೀಮರು

ಬಂಟ್ವಾಳ: ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಡಂಬು ರಾಷ್ಟೀಯ ಹೆದ್ದಾರಿಯ ಪಕ್ಕ ಇರುವ ದೇಜಪ್ಪ ಮೂಲ್ಯರ ಹಟ್ಟಿಯಿಂದ ಸೆ. ೩ರ ತಡರಾತ್ರಿ ಸುಮಾರು 2 ಗಂಟೆಯ ಸಮಯ ಹಟ್ಟಿಯ ಗೇಟನ್ನು ಮುರಿದು ಗೋವನ್ನು ಕದ್ದು ಅವರ ಜಾಗದಲ್ಲೇ ಅಮಾನುಷವಾಗಿ ಕಡಿದು, ಮಾಂಸ ಮಾಡಿ ತ್ಯಾಜ್ಯವನ್ನು ಅಲ್ಲೇ ಬಿಸಾಡಿ ಹೋಗಿರುತ್ತಾರೆ. ಈ ಘಟನೆಯನ್ನು ಹಿಂದೂ ಜಾಗರಣಾ ವೇದಿಕೆ ಉಗ್ರವಾಗಿ ಖಂಡಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ದೇಜಪ್ಪ ಮೂಲ್ಯರ ಮನೆಗೆ ಒಬ್ಬ ಮುಸಲ್ಮಾನ ದನದ ವ್ಯಾಪಾರಿ ಹೋಗಿ ದನವನ್ನು ಮಾರಾಟ ಮಾಡುತ್ತೀರಾ ಎಂದು ವಿಚಾರಿಸಿರುತ್ತಾನೆ. ಅದಕ್ಕೆ ಅವರು ಇಲ್ಲ ಎಂಬುವುದಾಗಿ ಉತ್ತರಿಸಿರುತ್ತಾರೆ. ಆ ಸಂದರ್ಭ ಆತನು ದೇಜಪ್ಪ ಮೂಲ್ಯರ ಮನೆಯ ವಾತಾವರಣವನ್ನು ಗಮನಿಸಿ ಈ ಗೋ ಕಳ್ಳತನ ಮಾಡಲು ಹೊಂಚು ಹಾಕಿರುವುದಾಗಿ ಅನುಮಾನ ವ್ಯಕ್ತಪಡಿಸಲಾಗಿದೆ.

ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ ಇದು 2ನೇ ಪ್ರಕರಣ. ಇಲ್ಲಿಯೂ ಆರೋಪಿಗಳ ಬಂಧನ ಆಗಿರುವುದಿಲ್ಲ. ಈ ನಾಡಿನಲ್ಲಿ ಪ್ರಭಲವಾದ ಗೋ ಹತ್ಯಾ ಕಾನೂನು ಜಾರಿಯಲ್ಲಿದೆ. ಆದರೂ ಯಾವ ಭಯ-ಆತಂಕವಿಲ್ಲದೆ ಅಕ್ರಮ ಗೋ ಸಾಗಾಟ, ಮಾರಾಟ, ಮಾಂಸ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಅದರಲ್ಲೂ ಹಟ್ಟಿಯಲ್ಲಿದ್ದ ಗೋವನ್ನು ಕದ್ದು ಅವರದ್ದೇ ತೋಟದಲ್ಲಿ ಕೊಂದು ಮಾಂಸ ಮಾಡಿ ಕೊಂಡು ಹೋಗುತ್ತಾರೆ ಅಂದರೆ ವ್ಯವಸ್ಥೆ ಎಷ್ಟು ಕುಲಗೆಟ್ಟು ಹೋಗಿರಬಹುದು ಎಂದು ಹಿಂಜಾವೇ ಪ್ರಶ್ನಿಸಿದೆ.
ಪೊಲೀಸ್‌ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳ ಹೆಸರಿನಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಹೆದರಿಸುವ, ರಾತ್ರಿ ಮನೆಗಳಿಗೆ ಹೋಗಿ ಬಾಗಿಲು ತಟ್ಟುವುದು, ಹಿಂದು ಕಾರ್ಯಕರ್ತರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವನ್ನು ಮಾಡುತ್ತಿದೆ. ಸಂಘಟನೆಯ ಒಬ್ಬ ಕಾರ್ಯಕರ್ತ ಅಕ್ರಮ ದನ ಸಾಗಾಟದ ವಾಹನವನ್ನು ತಡೆದು ನಿಲ್ಲಿಸಿದರೆ ಅವರ ಮೇಲೆ ಸುಮೋಟೋ ಕೇಸನ್ನು ಹಾಕುತ್ತಾರೆ. ಆದರೆ ಸಮಾಜದಲ್ಲಿ ಅಶಾಂತಿ ಮೂಡಿಸುವ, ಗೋ ಕಳ್ಳತನ ಮಾಡುವ, ಅಕ್ರಮ ಡ್ರಗ್‌ ಮಾಫಿಯಾದಲ್ಲಿ ಭಾಗಿಯಾಗಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದಿದೆ.
ಕೆದಿಲ, ಸತ್ತಿಕಲ್ಲು ಮತ್ತು ಸರೋಳಿ ಭಾಗದಿಂದ ಹಲವು ವರ್ಷಗಳಿಂದ ಗೋ ಕಳ್ಳತನ ಸಾಗಾಟ ನಡೆಯುತ್ತಿದೆ. ಇಲಾಖೆಗೂ ಗತ್ತಿದೆ ಆದರೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಈ ದಂಧೆ ಕೋರರಿಗೆ ಕಠಿಣ ಕ್ರಮ ಕೈಗೊಳ್ಳಬೇಕು & ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಗೋವನ್ನು ಕಳೆದುಕೊಂಡವರಿಗೆ ಗರಿಷ್ಠ ಪ್ರಮಾಣದ ಪರಿಹಾರವನ್ನು ಒದಗಿಸಿಕೊಡಬೇಕಾಗಿ ಹಿಂದೂ ಜಾಗರಣ ವೇದಿಕೆ ಮೂಡುಬಿದರೆ ತಾಲೂಕು ಸಂಯೋಜಕ ಹರಿಶ್ಚಂದ್ರ ಕೆ ಸಿ ಆಗ್ರಹಿಸಿದ್ದಾರೆ ಮತ್ತು ಘಟನೆಗೆ ಸಂಬಂಧಿಸಿದಂತೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಮುಂದೆ ನಡೆಯುವ ಅನಾಹುತಗಳಿಗೆ ನೇರ ಜಿಲ್ಲಾಡಳಿತ & ಇಲಾಖೆ ಹೊಣೆಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Related posts

Leave a Comment