Mangalore and Udupi news
Blog

ಶಿರ್ವ : ವ್ಯಕ್ತಿಯೋರ್ವರು ಎರಡನೇ ಮಹಡಿಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ‌ ಬಿದ್ದು ಮೃತ್ಯು…!!

ಶಿರ್ವ: ಉಡುಪಿ ಜಿಲ್ಲೆಯ ಶಿರ್ವಾ ವ್ಯಕ್ತಿಯೋರ್ವರು ಎರಡನೇ ಮಹಡಿಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ಮೃತಪಟ್ಟ ಘಟಕದ ಸಂಭವಿಸಿದೆ.

ಸಾವನ್ನಪ್ಪಿದ ವ್ಯಕ್ತಿ ಮೋಹನ್ ಆಚಾರ್ಯ ಎಂದು ತಿಳಿದು ಬಂದಿದೆ.

ಈ ಘಟನೆ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಆದಿತ್ಯ ಆಚಾರ್ (18),ಬೆಳಪು ಗ್ರಾಮ, ಕಾಪು ಇವರ ತಂದೆ ಮೋಹನ್‌ ಆಚಾರ್ಯ (52) ಎಂಬುವವರು ದಿನಾಂಕ 11/11/2025 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು, 11:45 ಗಂಟೆಗೆ ಶಿರ್ವ ಗ್ರಾಮದ ಕೆನರಾ ಬ್ಯಾಂಕ್‌ ನ ಎರಡನೇ ಮಹಡಿಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದವರನ್ನು ಅಲ್ಲಿಯೇ ಇದ್ದ ಜೇರಿ ಮಾರ್ಟೀಸ್ ಎಂಬುವವರು ಮೋಹನ್‌ ಆಚಾರ್ಯ ರವರನ್ನು ಉಪಚರಿಸಿ ಒಂದು ವಾಹನದಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ದಿನಾಂಕ 11/11/2025 ರಂದು ಮದ್ಯಾಹ್ನ 3:00 ಗಂಟೆಗೆ ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ.

ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 19/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ

Related posts

Leave a Comment