Mangalore and Udupi news
Blog

ಪುತ್ತೂರು : ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ : ರಿಕ್ಷಾ ಚಾಲಕನ ವಿರುದ್ಧ ಪೊಕ್ಸ ಪ್ರಕರಣ

ಪುತ್ತೂರು: ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಕಿರುಕುಳ ನೀಡಿದ ಆರೋಪಿ ರಿಕ್ಷಾ ಚಾಲಕನ ವಿರುದ್ಧ ಪೊಲೀಸರು ಪೊಕ್ಸ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯರಿಬ್ಬರು ಕೆಲವು ದಿನಗಳ ಹಿಂದೆ ಶಾಲೆಗೆ ತೆರಳುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದ. ನ.8ರಂದು ಬೆಳಿಗ್ಗೆ ಬಾಲಕಿಯರು ಶಾಲೆಗೆ ಹೋಗುತ್ತಿದ್ದಾಗ,ಅದೇ ಅಪರಿಚಿತ ವ್ಯಕ್ತಿಯು ಆಟೊ ರಿಕ್ಷಾದಲ್ಲಿ ಬಂದು ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆರೋಪಿ ರಿಕ್ಷಾ ಚಾಲಕ ಪ್ರಸಾದ್ ಎಂಬಾತನ ವಿರುದ್ಧ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 78(2) BNS 2023 U/S:12 POCSO Act 2012 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

Leave a Comment