Mangalore and Udupi news
Blog

ಸುಳ್ಯ: ಬಾವಿಗೆ ಬಿದ್ದ ಕರುವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

ಸುಳ್ಯ: ಬಾವಿಗೆ ಬಿದ್ದ ಕರುವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಸೋಣಂಗೇರಿ ಬಸ್ಸು ತಂಗುದಾಣದ ಬಳಿ ನಡೆದಿದೆ.

ಸೋಣಂಗೇರಿಯ ಯೋಗಿಶ್ ಎಂಬವರ ಕರು ಬಸ್ ತಂಗುದಾಣದ ಬಳಿ ಇರುವ 15 ಅಡಿ ಆಳದ ಬಾವಿಗೆ ಬಿದ್ದಿತ್ತು. ಬಳಿಕ ಕರುವನ್ನು ಅಗ್ನಿಶಾಮಕ ದಳ ಮತ್ತು ಊರವರು ಸೇರಿ ಸುರಕ್ಷಿತವಾಗಿ ಮೇಲಕೆತ್ತಿ ರಕ್ಷಣೆ ಮಾಡಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕಿರಣ್ ಕುಮಾರ್. ಎಸ್, ಸಿಬ್ಬಂದಿಯವರಾದ ಮಹಮ್ಮದ್ ರಫೀಕ್, ಚಂದ್ರಶೇಖರ ನಾಯಕ, ಸಂಜೀವ ಗೌಡ, ಹರ್ಷವರ್ಧನ, ಮೋಹನ್ ಬಾಬು, ಹೊನ್ನಪ್ಪ ಭಾಗವಹಿಸಿದರು.

Related posts

Leave a Comment