ಸುಬ್ರಮಣ್ಯ; ಮದುವೆಗೆ ವರನ ಕಡೆಯವರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಿಸಲೆ ಘಾಟ್ ನಲ್ಲಿ ನಡೆದಿದೆ.
ಹಾಸನದ ವನಗೂರು ಗ್ರಾಮದ ಯುವಕ ಹಾಗೂ ಏನೆಕಲ್ಲಿನ ಯುವತಿಗೆ ಇಂದು ಆದಿಸುಬ್ರಮಣ್ಯದ ಕೂಡುರಸ್ತೆ ಬಳಿಯ ಹಾಲ್ ವೊಂದರಲ್ಲಿ ಮದುವೆ ನಿಗದಿಯಾಗಿತ್ತು. ವರ ಹಾಗೂ ವಧು ನಿನ್ನೆಯೇ ಹಾಲ್ ಗೆ ತೆರಳಿದ್ದರು. ಇಂದು ವರನ ಕಡೆಯವರು ಮದುವೆ ಹಾಲ್ ಗೆ ಬರುವಾಗ ಬಸ್ ಅಪಘಾತವಾಗಿದೆ. 10ಕ್ಕೂ ಹೆಚ್ಚು ಮಂದಿಗೆ ಘಟನೆಯಲ್ಲಿ ಗಂಭೀರ ಗಾಯಗಳಾಗಿದ್ರೆ, 20ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಣ್ಣಪುಟ್ಟ ಗಾಯಗಳಾದವರಿಗೆ ಸುಬ್ರಮಣ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಂಭೀರ ಗಾಯಗಳಾದವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

