ಪಣಂಬೂರು: ಇಲ್ಲಿನ ಮೀನಕಳೀಯ ಕಡಲ ಕಿನಾರೆಯಲ್ಲಿ 45-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.
ವಾರೀಸುದಾರರಿಲ್ಲದ ಕಾರಣ ಮೃತದೇಹದವನ್ನು ನಗರದ ಸರ್ಕಾರಿ ಜಿಲ್ಲಾ ವೆನ್ಹಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಅಪರಿಚಿತ ಗಂಡಸಿನ ಚಹರೆ: ಪ್ರಾಯ ಸುಮಾರು 45-50, ಎತ್ತರ 5.5 ಅಡಿ, ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈ ಬಣ್ಣ, ಅರ್ಧ ಬೋಳು ತಲೆ, ಎಡ ಕೆನ್ನೆಯಲ್ಲಿ ಕಪ್ಪು ಮಚ್ಚೆ ಇರುತ್ತದೆ. ಕಪ್ಪು ಬಣ್ಣದ ಜಾಕಿ ಚಡ್ಡಿ ಧರಿಸಿರುತ್ತಾರೆ.ಈ ಚಹರೆಯ ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ಪಣಂಬೂರು ಪೊಲೀಸ್ ಠಾಣೆ ಫೋ: 0824-2220530, ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ 9480805355, ಅಥವಾ 0824-22208008 ಮಾಹಿತಿ ನೀಡುವಂತೆ ಪಣಂಬೂರು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

