Mangalore and Udupi news
Blog

ಕಾರ್ಕಳ : ಕಾರಿನಲ್ಲಿ ಮನೆಯಿಂದ ಹೋದ ವ್ಯಕ್ತಿಯೋರ್ವರು‌ ನಾಪತ್ತೆ…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಸಾಣೂರು ಗ್ರಾಮದ ನಿವಾಸಿಯೊಬ್ಬರು ನಾಪತ್ತೆಯಾದ ಘಟಕ ನಡೆದಿದೆ. ನಾಪತ್ತೆಯಾದ ವ್ಯಕ್ತಿ ಪ್ರಶಾಂತ ಎಂದು ತಿಳಿದು ಬಂದಿದೆ.

ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ಶ್ರೀಮತಿ ದೀಪಿಕಾ (35) ಗಂಡ.ಪ್ರಶಾಂತ ವಾಸ. ಪವನ್ ನಿವಾಸ ಸಾಣೂರು ಗ್ರಾಮ & ಅಂಚೆ ಕಾರ್ಕಳ ತಾಲೂಕು ಇವರ ಗಂಡ ಪ್ರಶಾಂತ (35) ಈತನು ದಿನಾಂಕ 05/11/2025 ರಂದು ಬೆಳಿಗ್ಗೆ 8:30 ಗಂಟೆಗೆ ಆತನ ವಾಸದ ಮನೆಯಾದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪವಮಾನ ನಿವಾಸ ಎಂಬಲ್ಲಿದ ಕೆಎ-19 ಎಮ್‌‌ಇ-7879 ನೇ ನಂಬ್ರದ ಕಾರಿನಲ್ಲಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್ ಕರೆ ಸಹ ಸ್ವೀಕರಿಸದೇ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 153/2025 ಕಲಂ: MAN MISSING ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

Leave a Comment