Mangalore and Udupi news
Blog

ಕಾಪು: ಜುಲೈ 25, 26, 27 ರಂದು ಬೃಹತ್ ಹಲಸು ಮೇಳ

ಪಡುಬಿದ್ರಿ: ಸಂಸ್ಕೃತಿ ಈವೆಂಟ್ಸ್ ಇವರು ಪ್ರಸ್ತುತ ಪಡಿಸುವ ಕಾಪು ಬೃಹತ್ ಹಲಸು ಮೇಳ
ಜುಲೈ 25, 26, 27 ರಂದು ಬೆಳಗ್ಗೆ 9:00 ರಿಂದ ರಾತ್ರಿ 8:00 ರವರೆಗೆ ಕಾಪು ಹಳೆ ಮಾರಿಗುಡಿ ಸಭಾಗೃಹದಲ್ಲಿ ಆಯೋಜಿಸಲಾಗಿದೆ.

ಈ ಮೇಳದಲ್ಲಿ ನಾಗು ಹಲಸು, ನಂದು ಹಲಸು, ಶಂಕರ ಹಲಸು, ರುದ್ರಾಕ್ಷಿ ಹಲಸು, ಚಂದ್ರ ಹಲಸು ಮುಂತಾದ ರುಚಿ ರುಚಿಯಾದ ಹಲಸಿನ ಹಣ್ಣು ಗಳು ಗುಬ್ಬಿ, ತುಮಕೂರು, ದೊಡ್ಡಬಳ್ಳಾಪುರ, ಉಪ್ಪಿನಂಗಡಿ, ಕುಂದಾಪುರ ಮುಂತಾದ ಪ್ರದೇಶಗಳಿಂದ ಬರಲಿವೆ. ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯ ಗಳಾದ ಹೋಳಿಗೆ – ಜಿಲೇಬಿ – ಸಾಟ್ – ಕಡುಬು – ಮುಳ್ಕ – ಕೇಸರಿ ಬಾತ್ – ಹಲ್ವಾ – ಪಾಯಸ – ಹಪ್ಪಳ – ಮಾಂಬುಳ – ಸೆಂಡಿಗೆ – ಚಿಪ್ಸ್ – ಜಾಮ್ – ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಪತ್ರೊಡೆ,
ಹಲಸಿನ ಐಸ್ ಕ್ರೀಮ್ – ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಕಲ್ಪರಸ, ಗೋಳಿ ಸೋಡಾ, ಆಭರಣ ಗಳು, ಉಡುಪಿ ಕೈಮಗ್ಗ – ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ಗಿಡಗಳ ಭಾರಿ ಸಂಗ್ರಹ ಇರುವ ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಜರುಗಲಿದೆ.
ಉದ್ಘಾಟನಾ ಕಾರ್ಯಕ್ರಮ ದಿನಾಂಕ ಜು.25 ಅಪರಾಹ್ನ 3 ರಿಂದ 4 ಗಂಟೆವರೆಗೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾನ್ಯ ಸಂಸದರು ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಮತ್ತು
ಕಾಪು ವಿನ ಮಾನ್ಯ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಇವರು ಮೇಳವನ್ನು ಉದ್ಘಾಟಿಸಲಿರುವರು.
ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಸ್ವಾದಿಷ್ಟ ತಿಂಡಿ ತಿನಿಸುಗಳನ್ನು ಆಸ್ವಾದಿಸಿ, ಖರೀದಿಸಿ, ಮೇಳವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ.

Related posts

Leave a Comment