ಬೈಂದೂರು: ಯಡ್ತರೆ ಗ್ರಾಮದ ಅಂತಾರ್ ಗದ್ದೆ ತೂದಳ್ಳಿ ಹೊಳೆಯ ಬದಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ನಾಗಪ್ಪ ಭಂಡಾರಿ(73) ಎಂದು ಗುರುತಿಸಲಾಗಿದೆ.
ಇವರು ಗದ್ದೆಯ ನೀರು ಕಡಿಯುವಾಗ ಆಕಸ್ಮಿಕವಾಗಿ ಆಯತಪ್ಪಿ ಕಾಲು ಜಾರಿ ಚರಂಡಿಗೆ ಬಿದ್ದು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.