ಮಲ್ಪೆ: ಮಲ್ಪೆ ಬಂದರಿನ ಧಕ್ಕೆಗೆ ಬಿದ್ದು ಓರಿಸ್ಸಾ ಮೂಲದ ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತ ಮೀನುಗಾರನನ್ನು ಓರಿಸ್ಸಾ ರಾಜ್ಯದ ಮನಧಾರ ಮುಂಡಾ(30) ಎಂದು ಗುರುತಿಸಲಾಗಿದೆ.
ಇವರು ಮಲ್ಪೆ ಬಂದರಿನಲ್ಲಿ ವಾದಿರಾಜ ಸುವರ್ಣ ಎಂಬವರ ಹನುಮ ಹೆಸರಿನ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿ ಕೊಂಡಿದ್ದು ಸೆ.28ರಂದು ರಾತ್ರಿ ಅಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು ಎಂದು ತಿಳಿದು w໐໖໖.
ಸೆ.30ರಂದು ಬೆಳಗ್ಗೆ ಬಂದರಿನ ಸಿಎಸ್ಪಿ ಕಛೇರಿ ಎದರು ದಕ್ಕೆಯ ನೀರಿನಲ್ಲಿ ಮುಂಡಾ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.