ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ವ್ಯಕ್ತಿಯೋರ್ವರು ಗದ್ದೆಯ ನೀರು ಕಡಿಯುವಾಗ ಆಕಸ್ಮಿಕವಾಗಿ ಆಯತಪ್ಪಿ ಕಾಲು ಜ್ಯಾರಿ ಪಕ್ಕದಲ್ಲಿ ಹರಿಯುವ ತೊಡಿಗೆ ಬಿದ್ದು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತ ಪಟ್ಟ ಘಟನೆ ಸಂಭವಿಸಿದೆ.
ಸಾವನ್ನಪ್ಪಿದವರು ನಾಗಪ್ಪ ಭಂಡಾರಿ ಎಂದು ಗುರುತಿಸಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿ ಗಣೇಶ ಭಂಡಾರಿ (38) ಯಡ್ತರೆ ಗ್ರಾಮ, ಬೈಂದೂರು ತಾಲೂಕು ಇವರ ಮಾವನಾದ ನಾಗಪ್ಪ ಭಂಡಾರಿ (73) ಯವರು ದಿನಾಂಕ 28-09-2025 ರಂದು ಸಂಜೆ 18:00 ಗಂಟೆಗೆ ಗದ್ದೆಯ ನೀರನ್ನು ಕಡಿಯಲು ಟವೆಲ್ ಕಟ್ಟಿಕೊಂಡು ಹೋಗಿದವರು ವಾಪಸ್ಸು ಬಂದಿರುವುದಿಲ್ಲ. ಫಿರ್ಯಾಧಿದಾರರು ಮತ್ತು ಅಕ್ಕ ಪಕ್ಕದವರೆಲ್ಲ ಸೇರಿ ಫಿರ್ಯಾಧಿದಾರರ ಮಾವನ್ನು ಹುಡುಕಾಡುತ್ತಿದ್ದಾಗ ದಿನಾಂಕ 29-09-2025 ರಂದು ಸಂಜೆ 07:30 ಗಂಟೆಗೆ ಯಡ್ತರೆ ಗ್ರಾಮದ ಅಂತಾರ್ ಗದ್ದೆ ತೂದಳ್ಳಿ ಹೊಳೆಯ ದಡದ ಪೊದೆಯಲ್ಲಿ ಒಂದು ಮೃತದೇಹ ಕಳಚಿ ಬಿದ್ದ ಸ್ಥಿತಿಯಲ್ಲಿ ಇದ್ದು ಫಿರ್ಯಾಧಿದಾರರು ಮತ್ತು ಸುರೇಶ ಮೇಸ್ತ, ರಾಘವೇಂದ್ರ ಭಂಡಾರಿ, ರಾಘು ಭಂಡಾರಿ, ಸೇರಿ ಮೃತದೇಹವನ್ನು ಅಂಗಾತ ಮಾಡಿ ನೋಡಿದ್ದಾಗ ಅದು ಫಿರ್ಯಾಧಿದಾರರ ಮಾವನಾದ ನಾಗಪ್ಪ ಭಂಡಾರಿಯವರ ಮೃತದೇಹವಾಗಿರುತ್ತದೆ. ಫಿರ್ಯಾಧಿದಾರರ ಮಾವ ಗದ್ದೆಯ ನೀರು ಕಡಿಯುವಾಗ ಆಕಸ್ಮಿಕವಾಗಿ ಆಯತಪ್ಪಿ ಕಾಲು ಜ್ಯಾರಿ ಪಕ್ಕದಲ್ಲಿ ಹರಿಯುವ ತೊಡಿಗೆ ಬಿದ್ದು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತ ಪಟ್ಟಿರುವುದಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್‌ಠಾಣೆ ಯು.ಡಿ.ಆರ್ 45/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.