ಮಂಗಳೂರು: ಕಾರ್ಣಿಕೊದ ಸತ್ಯೊಲು ಅರ್ಪಿಸುವ ಕುದ್ರೋಳಿದ ಸಿರಿ ತುಳು ಭಕ್ತಿ ಸುಗಿಪು ಆಲ್ಬಂ ಹಾಡು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿದೆ.
ಸಪ್ತಸ್ವರ ಆರ್ಕೆಸ್ಟ್ರಾ ನಿರ್ಮಾಣದಲ್ಲಿ, ಪ್ರಮೀಳಾ ದೀಪಕ್ ಪೆರ್ಮುದೆ ಅವರ ಸಾಹಿತ್ಯದಲ್ಲಿ ಮೂಡಿಬಂದಿದೆ. ವಿನೋದ್ ಸುವರ್ಣ ಅವರ ರಾಗ ಸಂಯೋಜನೆ, ಮುರಳೀಧರ ಉಡುಪಿ, ವಿಜಯ್ ಕುಳಾಯಿ, ಪ್ರಥಮ್ ಆಚಾರ್ಯ ಅವರ ಸಂಗೀತ, ಸ್ವರ್ಣಿಕ ಎಸ್ ಕೋಟ್ಯಾನ್ ಇವರ ಗಾಯನವಿದೆ.
ಛಾಯಾಗ್ರಹಣ, ಸಂಕಲನ, ಮತ್ತು ವಿಡಿಯೋಗ್ರಾಫಿ ವಿಜೇಶ್ (ಬ್ಲಾಕ್ ಡಾಟ್ ಎಡಿಟಿವ್) ಪ್ರಚಾರ ಕಲೆ ದಿನೇಶ್ ಸಿ.ಎಚ್ ವಿಟ್ಲ, ಸಲಹೆ ಸಹಕಾರ ಪ್ರೀತಮ್ ಮಜಿಲ ಗುತ್ತು ಇವರದ್ದಾಗಿದೆ. ಸುಶೀಲ್ ಕುಮಾರ್, ಇಂದುಮತಿ, ಸ್ವಸ್ತಿಕ್, ವಿಜೇಶ್, ಲತೇಶ್ ಕುಲಾಲ್, ಚಿರಂಜೀವಿ, ವಿಘ್ನೇಶ್ ಕುಲಾಲ್ ಇವರು ಸಹಕರಿಸಿದ್ದಾರೆ.
ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದ ವೇಳೆ ದೇಗುಲದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು
ದೇವೇಂದ್ರ ಪೂಜಾರಿ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಫರೀದ್, ಆನಂದ ಅಮೀನ್ ಕೃಷ್ಣಾಪುರ ಸೇರಿದಂತೆ ಇತರರು ಜೊತೆಗಿದ್ದರು.