Mangalore and Udupi news
Blog

ರಾಜ್ಯದ ಜನತೆಗೆ ಕೆಎಂಎಫ್ ನಿಂದ ಗುಡ್ ನ್ಯೂಸ್: ಸೆ. 22ರಿಂದ ನಂದಿನಿ ಉತ್ಪನ್ನಗಳ ದರ ಇಳಿಕೆ

ಬೆಂಗಳೂರು: ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಇಳಿಕೆ ಬೆನ್ನಲ್ಲೇ ಇದೀಗ ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಆಗಿದ್ದು, ಸೋಮವಾರದಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ. ಆ ಮೂಲಕ ರಾಜ್ಯದ ಜನರಿಗೆ ಕೆಎಂಎಫ್ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಅಧಿಕೃತ ಆದೇಶ ಬಾಕಿಯಿದೆ.

ಜಿಎಸ್ಟಿ ಇಳಿಕೆ ಬೆನ್ನಲ್ಲೇ ದರ ಇಳಿಕೆಗೆ ಸಜ್ಜಾಗಿರುವ ಕೆಎಂಎಫ್ ಈ ಬಗ್ಗೆ ಶುಕ್ರವಾರ ಕೆಎಂಎಫ್ ಅಧಿಕಾರಿಗಳು ಸಭೆ ಮಾಡಿದ್ದಾರೆ. ಸಭೆಯಲ್ಲಿ ಯಾವುದರ ದರ ಎಷ್ಟು ಇಳಿಕೆ ಎಂಬುವುದನ್ನು ನಿರ್ಧಾರ ಮಾಡಲಾಗಿದೆ. ಮೊಸರಿನ ದರ ಲೀಟರ್ಗೆ 4 ರೂ. ಇಳಿಕೆ ನಿರೀಕ್ಷೆ ಇದೆ. ಜೊತೆಗೆ ತುಪ್ಪ, ಬೆಣ್ಣೆ, ಲಸ್ಸಿ ಸೇರಿ ಹಲವು ಉತ್ಪನ್ನಗಳ ದರ ಕೂಡ ಇಳಿಕೆ ಆಗಿದೆ.

2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸಲಾಗಿತ್ತು. 2022 ರಲ್ಲಿ ಜಿಎಸ್ಟಿಯನ್ನ ಶೇಕಡಾ 22ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿದ್ದು, ಇದು ಸೆ. 22ರಿಂದ ಜಾರಿಗೆ ಬರಲಿದೆ. ಆ ಮೂಲಕ ಗ್ರಾಹಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಕರ್ನಾಟಕದ ಸ್ಟಾರ್ ಬ್ರ್ಯಾಂಡ್ ಕೆಎಂಎಫ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಎಲ್ಲೆಡೆ ಭಾರೀ ಬೇಡಿಕೆ ಇದೆ. ಇತ್ತೀಚೆಗೆ ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್ ದರ ಪ್ರತಿ ಲೀಟರ್ಗೆ 4 ರೂ. ಏರಿಕೆ ಮಾಡಲಾಗಿತ್ತು. ಅದೇ ರೀತಿಯಾಗಿ ಮೊಸರಿನ ದರ ಕೂಡ ಪ್ರತಿ ಲೀಟರ್ಗೆ 4 ರೂ. ಏರಿಕೆ ಮಾಡಲಾಗಿತ್ತು. ಸದ್ಯ ಈ ನಾಲ್ಕು ರೂ. ಅನ್ನು ಕೆಎಂಎಫ್ ಕಡಿತಕ್ಕೆ ನಿರ್ಧರಿಸಿದೆ.

Related posts

Leave a Comment