ಕುಂದಾಪುರ: ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ಸ್ಕೂಟರ್ ಸವಾರ ಅಂಕದ ಕಟ್ಟೆ ಹರ್ಷ ಐತಾಳ (46) ಎಂದು ತಿಳಿದು ಬಂದಿದೆ.
ಪುತ್ರಿ ಸ್ವರ್ಣಾ ಜಿ. ಜತೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬೀಜಾಡಿ ಗ್ರಾಮದ ಹೂವಿನಕೆರೆ ಮುಖ್ಯದ್ವಾರದ ಎದುರು ಬ್ಯಾರಿಕೇಡ್ ಸಮೀಪ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಹರ್ಷ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.