Mangalore and Udupi news
Blog

ಮಗನನ್ನು ಶಾಲೆಗೆ ಬಿಟ್ಟು ಮಹಿಳೆ ನಾಪತ್ತೆ!

ಮೂಡುಬಿದಿರೆ: ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಹೋದ ಕಡಂದಲೆ ಗ್ರಾಮದ ಮಹಿಳೆಯೊಬ್ಬರು ಸೆ.10ರಂದು ನಾಪತ್ತೆಯಾಗಿದ್ದಾರೆ.

ಮೂಡುಬಿದಿರೆ ಕಡಂದಲೆ ಗ್ರಾಮದ ಪೂಪಾಡಿಕಲ್ಲಿನ ಪವಿತ್ರಾ(29) ನಾಪತ್ತೆಯಾದ ಮಹಿಳೆ. 9 ವರ್ಷಗಳ ಹಿಂದೆ ಗಣೇಶ್ ಎಂಬವರನ್ನು ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ಈಕೆ ಬುಧವಾರ ಬೆಳಗ್ಗೆ ತನ್ನ ಮಗ ಹಾಗೂ ತಂಗಿಯ ಮಗನನ್ನು ಕಡಂದಲೆ ವಿದ್ಯಾಗಿರಿ ಶಾಲೆಗೆ ಬಿಡಲು ಹೋಗಿದ್ದು, ಬಳಿಕ ಮನೆಗೆ ಹಿಂದುರುಗಿಲ್ಲ. ಬೆಳಗ್ಗೆ 11.30ರ ವೇಳೆಗೆ ಆಕೆಯ ತಂಗಿ, ತಂದೆಗೆ ಕಾಲ್ ಮಾಡಿದ್ದು, ಅಕ್ಕನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿಸಿದ್ದಾಳೆ. ಮನೆಯವರು ಸಂಜೆಯವರೆಗೆ ಬರುತ್ತಾಳೆ ಎಂದು ಕಾದರೂ, ಬಳಿಕ ಅಸುಪಾಸಿನಲ್ಲಿವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದರೂ, ಯಾವುದೇ ಸುಳಿವು ಸಿಗಲಿಲ್ಲ. ಗುರುವಾರ ಬೆಳಿಗ್ಗೆ ಪವಿತ್ರಾಳ ತಂದೆ ಕೇಶವ ಶೆಟ್ಟಿಗಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಹರೆ: 5.5 ಅಡಿ ಎತ್ತರ, ಕೋಲು ಮುಖ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ತುಳು ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ನಾಪತ್ತೆಯಾಗುವ ಸಂದರ್ಭ ಕೇಸರಿ ಬಣ್ಣದ ಚೂಡಿದಾರ, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮಹಿಳೆಯ ಕುರಿತು ಸುಳಿವು ಸಿಕ್ಕಲ್ಲಿ ಮೊ. ಸಂಖ್ಯೆ 9480802314 (ಪೊಲೀಸ್ ಠಾಣೆ) ಮಾಹಿತಿ ನೀಡುವಂತೆ ಕೋರಲಾಗಿದೆ.

Related posts

Leave a Comment